ಜಿಲ್ಲೆ

ಮುರ್ಡೆಶ್ವರದಲ್ಲಿ ಪ್ರವಾಸಿಗರ ಮಸ್ತಿ

ಸುಭಾಸ ಹೆಗಡೆ ಧೂಪದಹೊಂಡ

ಭಟ್ಕಳ: ಕ್ರಿಸ್​ವುಸ್, ವೀಕೆಂಡ್, ಹೊಸ ವರ್ಷಗಳ ಸಾಲು ಸಾಲಾಗಿ ಬರುತ್ತಿದ್ದು, ಸರಣಿ ರಜೆಗಳಿಂದ ಪ್ರವಾಸಿಗರು ತಾಲೂಕಿನ ಮುರ್ಡೆಶ್ವರಕ್ಕೆ ಲಗ್ಗೆ ಇಡುತ್ತಿದ್ದಾರೆ.

ಕಳೆದ 9 ತಿಂಗಳುಗಳಿಂದ ಪ್ರವಾಸಿಗರನ್ನು ಕಾಣದೆ ಮುರ್ಡೆಶ್ವರ ಬಿಕೋ ಎನ್ನುತ್ತಿತ್ತು. ಆದರೆ, ವರ್ಷಾಂತ್ಯಕ್ಕೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಮುರ್ಡೆಶ್ವರ ಬಹುತೇಕ ಎಲ್ಲ ಲಾಜ್​ಗಳು ಪ್ರವಾಸಿಗರಿಂದ ಫುಲ್ ಆಗಿವೆ. ಬೀಚ್ ಬದಿಯ ಅಂಗಡಿಗಳಲ್ಲೂ ಪ್ರವಾಸಿಗರ ಖರೀದಿ ಜೋರಾಗಿ ನಡೆಯತ್ತಿದೆ. ನೀರಿನಲ್ಲಿ ಮೋಜಿನಾಟ, ಮಾಸ್ಟ್ ಇಲ್ಲದೆ ಓಡಾಟ, ಪರಸ್ಪರ ಅಂತರ ಮರೆತ ವರ್ತನೆ ಒಟ್ಟಾರೆಯಾಗಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಪ್ರವಾಸಿಗರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.