ರಾಮಸಾಗರ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಬಳ್ಳಾರಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸ್ಥಳ ಪರಿಶೀಲಿಸಿದರು. ಅಧಿಕಾರಿಗಳಾದ ಪ್ರಭುಲಿಂಗ, ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಕೆ.ಹನುಮಂತಪ್ಪ, ಶರಣಪ್ಪ ಬೊಮ್ಮಗಂಡಿ ಇತರರಿದ್ದರು. 
ಜಿಲ್ಲೆ

ಪ್ರವಾಸೋದ್ಯಮ ಉತ್ತೇಜಿಸಲು ಸ್ಥಳ ಪರಿಶೀಲನೆ

ಕಂಪ್ಲಿ: ಪ್ರವಾಸೋದ್ಯಮವನ್ನು ಉತ್ತೇಜಿಸಲು ತಾಲೂಕಿನ ರಾಮಸಾಗರ ಗ್ರಾಮ ವಿವಿಧ ಸ್ಥಳಗಳಿಗೆ ಬಳ್ಳಾರಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಗುರುವಾರ ಭೇಟಿ ನೀಡಿ, ಸ್ಥಳ ಪರಿಶೀಲಿಸಿದರು.

ಐತಿಹಾಸಿಕ ತಾಣ ಹಂಪಿಯು ರಾಮಸಾಗರ ಗ್ರಾಮಕ್ಕೆ ಹತ್ತಿರವಾಗಿದ್ದರಿಂದ ಪ್ರವಾಸಿಗರನ್ನು ಆಕರ್ಷಿಸಲು ರೆಸಾರ್ಟ್, ಲಾಡ್ಜ್, ರೆಸ್ಟೊರೆಂಟ್ ನಿರ್ಮಿಸಲು ತುಂಗಭದ್ರಾ ನದಿ ತಟದ ಆಸುಪಾಸಿನ ಪಂಪಾವಿದ್ಯಾಪೀಠ, ಗುಡದೂರು ನಂದಕಟ್ಟೆ, ಕಣವಿ ಮಾರೆಮ್ಮ ಕಲ್ಯಾಣಿ, ನೀರಿನ ಪಂಪ್‌ಹೌಸ್ ಹತ್ತಿರ ಸ್ಥಳ ವೀಕ್ಷಿಸಿದರು.

ಕಮಲಾಪುರದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪ್ರಭುಲಿಂಗ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಪಿಡಿಒ ಕೆ.ಹನುಮಂತಪ್ಪ, ಗ್ರಾಪಂ ಸದಸ್ಯ ಶರಣಪ್ಪ ಬೊಮ್ಮಗಂಡಿ, ಟಿಐಇಸಿ ಹನುಮೇಶ ಆಗಲೂರು ಹೊಸಳ್ಳಿ, ತಾಂತ್ರಿಕ ಸಹಾಯಕ ಸಂಗಮೇಶ ಇತರರಿದ್ದರು.