ಜಿಲ್ಲೆ

Tourism ಉತ್ತರ ಕನ್ನಡಕ್ಕೆ ಅನ್ಯಾಯ ಮಾಡಿತೇ ಕಾಂಗ್ರೆಸ್‌ ಸರ್ಕಾರ.?11.

Uttara Kannada - Subash Hegde

ಕಾರವಾರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಹಾಗೂ Tourism ಪ್ರವಾಸೋದ್ಯಮ ತಾಣವಾದ ಗೋಕರ್ಣದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿ ರಾಜ್ಯ ಸರಕಾರವು ರೋರಿಕ್ ಮತ್ತು ದೇವಿಕಾರಾಣಿ ರೋರಿಕ್ ಎಸ್ಟೇಟ್ ನ ಅಭಿವೃದ್ಧಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ Tourism ಸಚಿವಾಲಯದಿಂದ ಮಂಜೂರು ಮಾಡಿರುವ `ಇನ್ವೆಸ್ಟ್ಮೆಂಟ್ ಆಫ್ ಎಲೆಕ್ಟ್ರಾನಿಕ್ ಟೂರಿಸ್ಟ್ ಸೆಂಟರ್ ಟು ಗ್ಲೋಬಲ್ ಸ್ಕೇಲ್' ಯೋಜನೆಯಡಿ ರಾಜ್ಯಗಳಿಗೆ ವಿಶೇಷ ಅನುದಾನ ಮಂಜೂರು ಮಾಡಿ, ಸ್ಥಳೀಯ ಪ್ರವಾಸೋದ್ಯಮ ಸ್ಥಳಗಳನ್ನು ಮೇಲ್ದರ್ಜೆಗೇರಿಸಲು ಕರ್ನಾಟಕದಿಂದ ಎರಡು ಪ್ರವಾಸೋದ್ಯಮ ಸ್ಥಳಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿತ್ತು. ಅದರಲ್ಲಿ ಈ ಹಿಂದೆ ಕಳಿಸಿದ್ದ ಪ್ರಸ್ತಾವನೆಯಲ್ಲಿದ್ದ ಗೋಕರ್ಣವನ್ನು ಕೈ ಬಿಡಲಾಗಿದೆ.

Tourism Minister ಒಪ್ಪಿದ್ರು

ಈ ಹಿಂದೆ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ. ಪತ್ರ ಮುಖೇನ ಗೋಕರ್ಣದ ಪ್ರಸ್ತಾವನೆಯನ್ನು ನೀಡಲಾಗಿತ್ತು. ಸಚಿವರು ಮಂಜೂರು ಮಾಡುವ ಭರವಸೆಯನ್ನೂ ನೀಡಿದ್ದರು.ಈ ಕುರಿತಾಗಿ ರಾಜ್ಯ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರೊಂದಿಗೂ ಸಮಾಲೋಚನೆ ನಡೆಸಲಾಗಿತ್ತು. ಆದರೆ,ರಾಜ್ಯಾದ್ಯಂತ ಪುರಾತನ ಕೋಟೆಗಳು, ಪ್ರಾಚೀನ ಧಾರ್ಮಿಕ ಪುಣ್ಯಕ್ಷೇತ್ರಗಳು, ನೈಸರ್ಗಿಕ ಸುಂದರ ತಾಣಗಳು ಹಾಗೂ ಇತರ ಪ್ರವಾಸಿ ತಾಣಗಳು ಇರುವಾಗ ಅವುಗಳೆಲ್ಲವನ್ನು ನಿರ್ಲಕ್ಷಿಸಿದ ಕರ್ನಾಟಕ ಸರ್ಕಾರವು ವಿವಾದಿತ ಸ್ಥಳವಾದ `ರೋರಿಕ್ ಮತ್ತು ದೇವಿಕಾರಾಣಿ ರೋರಿಕ್ ಎಸ್ಟೇಟ್‌ನ್ನು' ಪ್ರವಾಸೋಧ್ಯಮ Tourism ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಅತ್ಯಂತ ಬೇಸರದ ಸಂಗತಿ. ರಾಜ್ಯ ಸರ್ಕಾರದ ಇಂತಹ ನಿಲುವನ್ನು ಖಂಡಿಸುವುದಾಗಿ ಸಂಸದ ಕಾಗೇರಿ ಹೇಳಿದ್ದಾರೆ.

ಒಂದು ಕಡೆ ಉತ್ತರಕನ್ನಡ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತಿಯನ್ನು ಪ್ರಕಟಿಸುವುದಾಗಿ ರಾಜ್ಯ ಸರ್ಕಾರ ಆಶ್ವಾಸನೆ ನೀಡುತ್ತದೆ.ಅದೇ ಸಂದರ್ಭದಲ್ಲಿ ಜಿಲ್ಲೆಗೆ ಬರಬಹುದಾದ ಕೇಂದ್ರದ ಅನುದಾನವನ್ನು ಬೇರೆ ಕಡೆ ನೀಡಲು ಪ್ರಸ್ತಾವನೆ ಸಲ್ಲಿಸುತ್ತದೆ. ರಾಜ್ಯ ಸರ್ಕಾರಕ್ಕೆ ಈ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಬದ್ಧತೆಯಿದ್ದಲ್ಲಿ ಈ ಹಿಂದೆಯೇ ಸಂಸದರು ಸಲ್ಲಿಸಿದ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸಬೇಕು. ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದಿದ್ದಾರೆ.

ಏನಿದು ರೋರಿಕ್ ಎಸ್ಟೇಟ್..? ರಷ್ಯಾ ದೇಶದ ವಿಶ್ವ ವಿಖ್ಯಾತ ಕಲಾವಿದ ಸ್ಟೆತಾಸ್ಲಾವ್ ರೋರಿಕ್ ಅವರು ದೇಶದ ಪ್ರಸಿದ್ಧ ಚಿತ್ರ ನಟಿ ದೇವಿಕಾರಾಣಿ ಅವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಬೆಂಗಳೂರಿನ ಹೊರವಲಯದ 468 ಹೆಕ್ಟೇರ್ ತಾತಾಗುಣಿ ಎಸ್ಟೇಟ್‌ನ್ನು ಪಡೆದಿದ್ದರು. ಅಲ್ಲಿ ಚಿತ್ರವನ್ನು ರಚಿಸಿದ್ದರು. ಆದರೆ, ದಂಪತಿ ನಿಧನದ ನಂತರ ರೋರಿಕ್ ಅವರ ಚಿತ್ರಗಳು ಅನಾಥವಾಗುವುದನ್ನು ತಪ್ಪಿಸಲು 1996 ರಲ್ಲಿ ಆ ಎಸ್ಟೇಟ್‌ನ್ನು ವಶಕ್ಕೆ ಪಡೆದಿದೆ. ಅದರ ಮೇಲ್ವಿಚಾರಣೆಗೆ ರೋರಿಕ್ ಎಸ್ಟೇಟ್ ಮಂಡಳಿಯನ್ನು ರಚಿಸಿದೆ.