ಸುಂಟಿಕೊಪ್ಪ: ಸುಂಟಿಕೊಪ್ಪ ಪಟ್ಟಣದಲ್ಲಿ ಮಂಗಳವಾರ ಸಂಜೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ವಿವಿಧ ಬಡಾವಣೆಗಳಿಂದ ಹರಿದು ಬಂದ ನೀರು ಜನತಾ ಕಾಲನಿಯ ತಗ್ಗು ಪ್ರದೇಶಗಳಿಗೆ ನುಗ್ಗಿತು.
ಅತೂರು ತೋಟ, ಪಾರ್ವತಿ ಬಡಾವಣೆಗಳಿಂದ ಮಾರುಕಟ್ಟೆಗಳ ಮೂಲಕ ಕೆಸರು ಮಿಶ್ರಿತ ನೀರು ರಾಷ್ಟ್ರೀಯ ಹೆದ್ದಾರಿ ಹಾದು ಜನತಾ ಕಾಲನಿಯ ತಗ್ಗು ಪ್ರದೇಶದ ಮನೆ ಹಾಗೂ ಅಂಗಡಿ, ಮುಂಗಟ್ಟುಗಳಿಗೆ ನುಗ್ಗಿತು. ರಸ್ತೆಯಲ್ಲಿ ನೀರು ಹರಿದ ಪರಿಣಾಮ ಆಟೋ ಚಾಲಕರು, ವಾಹನಗಳು, ಶಾಲಾ ಮಕ್ಕಳು, ಸಾರ್ವಜನಿಕರು ಸಂಚರಿಸಲು ಪರದಾಡುವಂತಾಯಿತು.