ಜಿಲ್ಲೆ

ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದೆ ಎಂದು ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್ ಹೇಳಿದರು. ಸಮೀಪದ ತೊರೆನೂರು ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ 2024-25ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮವಾಗಿ ಕಾರ್ಯ ಚಟುವಟಿಕೆಯೊಂದಿಗೆ 25 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು, 16.10 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಒಟ್ಟು 19 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದ್ದು, ಇದರಲ್ಲಿ ಕೆಸಿಸಿ ಸಾಲ 10.5 ಕೋಟಿ ರೂ. ವಿತರಣೆ ಮಾಡಲಾಗಿದೆ. ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದರು.

ಹೆಬ್ಬಾಲೆ ಬಾಣವಾರ ರಸ್ತೆಯಲ್ಲಿರುವ ಸಂಘದ ಜಾಗವನ್ನು ಅಳತೆ ಮಾಡಿ ಹದ್ದು ಬಸ್ತು ಮಾಡಬೇಕು ಎಂದು ಸದಸ್ಯ ಪಾಂಡುರAಗ ಸಲಹೆ ನೀಡಿದರು. ಸದಸ್ಯರು ಮರಣ ನಿಧಿಗೆ 2 ಸಾವಿರ ರೂ. ಹಣ ಪಾವತಿ ಮಾಡಬೇಕು. ಸದಸ್ಯರು ಮರಣಹೊಂದಿದರೆ ಅವರ ಕುಟುಂಬಕ್ಕೆ ರೂ.15 ಸಾವಿರ ವಿತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಪ್ರೀತು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.

ಸಂಘದ ಉಪಾಧ್ಯಕ್ಷೆ ಗೌರಮಣಿ, ನಿರ್ದೇಶಕರಾದ ಕೆ.ಎಸ್. ಕೃಷ್ಣೇಗೌಡ, ಎಚ್.ಬಿ.ಚಂದ್ರಪ್ಪ, ಕೆ.ಬಿ.ದೇವರಾಜ್, ಉದಯಕುಮಾರ್, ಎಚ್.ಟಿ.ಕುಶಾಲಪ್ಪ, ಎಚ್.ಸಿ. ಮೂರ್ತಿ, ಟಿ.ಜೆ. ರವಿಕುಮಾರ್, ಟಿ.ಎ.ರವಿಚಂದ್ರ, ಟಿ.ಎಸ್. ಹರೀಶ್, ಹೇಮಾ, ಮೇಲ್ವಿಚಾರಕ ಭರತ್ ಕುಮಾರ್ ಇದ್ದರು.

ಸಭೆಯ ಆರಂಭದಲ್ಲಿ ನಡೆದ ಚರ್ಚೆಯಲ್ಲಿ ಸದಸ್ಯರಾದ ಲೋಕೇಶ್, ಈಶ್ಚರ, ಚಂದ್ರಣ್ಣ, ರವಿ, ಗಣೇಶ್, ಮೋಹನ್ ಮತ್ತಿತರು ಪಾಲ್ಗೊಂಡಿದ್ದರು