ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು. ಅಂತೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಹಿಂದು ಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಹನುಮ ಧ್ವಜ ಸಮಿತಿಯಿಂದ ಕೆರಗೋಡು ಗ್ರಾಮದ ಪೆಟ್ರೋಲ್ ಬಂಕ್‌ನಿಂದ ಅರ್ಜುನ ಸ್ತಂಭದವರೆಗೆ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು. ಅದರಂತೆ ಅರ್ಜುನ ಸ್ತಂಭದ ಎದುರು ರಂಗೋಲಿಯಲ್ಲಿ ಹನುಮ ಧ್ವಜ ಬಿಡಿಸಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ಇನ್ನೆನ್ನ್ೂ ಮೆರವಣಿಗೆ ಆರಂಭವಾಗಿ ಪುನೀತ್ ಕೆರೆಹಳ್ಳಿ ಪಾಲ್ಗೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ಆಗಮಿಸಿದ್ದ ಪುನೀತ್, ಅಂಕಣದೊಡ್ಡಿ ಗ್ರಾಮದ ಹಿಂದು ಕಾರ್ಯಕರ್ತರ ಮನೆಯಲ್ಲಿದ್ದರು. ಕೆರಗೋಡು ಗ್ರಾಮಕ್ಕೆ ತೆರಳುತ್ತಿದ್ದಂತೆ ಪೊಲೀಸರು ತಡೆದರು. ಆದರೆ ಇದಕ್ಕೆ ಹಿಂದು ಕಾರ್ಯಕರ್ತರು ವಿರೋಧಿಸಿ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಪುನೀತ್ ಅವರನ್ನು ನಮ್ಮೊಂದಿಗೆ ಕಳುಹಿಸಿಕೊಡಿ ಎಂದು ಪಟ್ಟು ಹಿಡಿದರು. ಆದಾಗ್ಯೂ ಪೊಲೀಸರು ಅವಕಾಶ ಕೊಡದ ಹಿನ್ನೆಲೆಯಲ್ಲಿ ಬಿಡುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರ ವರ್ತನೆ ವಿರುದ್ಧ ಆಕ್ಷೇಪಿಸಿದ ಪುನೀತ್, ನಾನು ಹಿಂದು, ನನಗೆ ಧಾರ್ಮಿಕ ಹಕ್ಕಿಲ್ಲವೇ?. ನನ್ನ ತಡೆಯುವುದಕ್ಕೆ ನಿಮಗೆ ಹಕ್ಕಿದಿಯೇ?. ನಾನು ಕೆರಗೋಡಿಗೆ ಹೋಗಬಾರದು ಇದ್ದರೆ ಆದೇಶ ಪ್ರತಿ ಕೊಡಿ. ಇಲ್ಲ ನಾನ್ು ನಿಮ್ಮೊಂದಿಗೆ ಬರುವುದಿಲ್ಲ ಎಂದು ವಾಗ್ವಾದ ನಡೆಸಿದರು. ಇಷ್ಟಾದರೂ ಪೊಲೀಸರು ಪುನೀತ್ ಅವಕಾಶ ಕೊಡಲಿಲ್ಲ. ಇತ್ತ ಕೊನೆಗೆ ಕೆರಗೋಡು ಗ್ರಾಮದಲ್ಲಿ ನೂರಾರೂ ಜನರು ಪಂಜಿನ ಮೆರವಣಿಗೆ ನಡೆಸಿದರು. ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಇತರರಿದ್ದರು.
ರಾಜ್ಯ ಸರ್ಕಾರದ ಹುನ್ನಾರವೆಂದ ಪುನೀತ್ ಕೆರೆಹಳ್ಳಿ
ಹಿಂದುಗಳು ಸಂಘಟಿತರಾಗದಂತೆ ತಡೆಯುವುದು ಕಾಂಗ್ರೆಸ್ ಸರ್ಕಾರದ ಹುನ್ನಾರ ಎಂದು ಹಿಂದು ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ಶಾಂತಿಯುತ ಪಂಜಿನ ಮೆರವಣಿಗೆ ಮತ್ತು ಅಂದಿನ ಘಟನೆ ಖಂಡಿಸಿ ಕರಾಳ ದಿನದ ಆಚರಣೆ ನಡೆಯುತ್ತಿದೆ. ನನ್ನನ್ನು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆಯಲು ಯಾವ ಆದೇಶ ಇದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನ್ನನ್ನು ಜಿಲ್ಲೆಗೆ ಬರದಂತೆ ನಿರ್ಬಂಧಿಸಿ ಆದೇಶಿದ್ದಾರಾ ಎಂದು ಪ್ರಶ್ನಿಸಿದರು.
ಪೊಲೀಸರು ಯಾವುದೇ ಆದೇಶವಿಲ್ಲದೆ ನನ್ನನ್ನು ನಿರ್ಬಂಧಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ. ನನ್ನ ಮೂಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಪೊಲೀಸರು ರೌಡಿಗಳಂತೆ ವರ್ತಿಸಿದ್ದಾರೆ. ತುಘಲಕ್ ರಾಜ್ಯ ಸರ್ಕಾರದ ರೌಡಿಸಂ ಖಂಡನೀಯ. ಕೆರಗೋಡಿನ ಶಾಂತಿಯುತ ಹೋರಾಟ ತಡೆಯುವುದು ನಿಮ್ಮ ಉದ್ದೇಶವಾ?. ಹಿಂದುಗಳು ಜಾಗೃತರಾಗುವುದು ತಡೆಯುವುದು ಉದ್ದೇಶನಾ?. ನನ್ನಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ವಾಪಸಾಗಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ಸರ್ಕಾರ ಹಿಂದು ಕಾರ್ಯಕರ್ತರನ್ನು ಬಂಧಿಸಿ ಕೇಸ್ ಹಾಕುವುದು ಬೇಡ. ್ಮುಂದಿನ ದಿನಗಳಲ್ಲಿ ನಾನು ಕೆರಗೋಡು ಗ್ರಾಮಕ್ಕೆ ಬಂದೇ ಬರುತ್ತೇನೆ. ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದರು.