ಜಿಲ್ಲೆ

ಕಾಂಗ್ರೆಸ್ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ

ವಿವೇಕಾನಂದ ದಾಸನಕೊಪ್ಪ

ಶಿಗ್ಗಾಂವಿ: ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.

ಪಟ್ಟಣದ ಅಂಚೆ ಕಚೇರಿಯಿಂದ ಕಾಂಗ್ರೆಸ್ ಮುಖಂಡ ಮುನ್ನಾ ಪಠಾಣ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ, ಗುಂಡೇಟಿಗೆ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದರು.

ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ಪುರಸಭೆ ಸದಸ್ಯರಾದ ಗೌಸಖಾನ್ ಮುನಶಿ, ಮಂಜುನಾಥ ಮಣ್ಣನ್ನವರ, ಶ್ರೀಕಾಂತ ಪೂಜಾರ, ಬಸವರಾಜ ಜೇಕಿನಕಟ್ಟಿ, ಶಂಭುಲಿಂಗಪ್ಪ ಆಜೂರ, ಸುಧೀರ ಲಮಾಣಿ, ಅಬ್ದುಲಕರೀಂ ಮೊಗಲಲ್ಲಿ, ಮುಕ್ತಾರ ತಿಮ್ಮಾಪೂರ, ಮಹ್ಮದಹನೀಫ್ ಅಂಬೂರ, ಮುನ್ನಾ ಲಕ್ಷೆ್ಮೕಶ್ವರ, ಮಲ್ಲಮ್ಮ ಸೋಮನಕಟ್ಟಿ, ಅನಸೂಯಾ ಬಳಿಗಾರ, ಚಂದ್ರು ಕೊಡ್ಲಿವಾಡ, ಶಂಭು ನೆರ್ತಿ, ಸುಮಿತ ಸೂರ್ಯವಂಶಿ, ಫಿರೋಜ್ ಕಾಮನಹಳ್ಳಿ, ಅತ್ತಾವುಲ್ಲಾಖಾನ್ ಖಾಜೇಖಾನವರ, ಮುನ್ನಾ ಮಾಲ್ದಾರ, ಅಸೀಫ ಕಣವಿ, ಸರತಾಜ ಹಾನಗಲ್ಲ, ಕಾರ್ಯಕರ್ತರು ಉಪಸ್ಥಿತರಿದ್ದರು.