ಜಿಲ್ಲೆ

ತೋಂಟದಾರ್ಯ ವಸತಿ ಶಾಲೆ ಚಾಂಪಿಯನ್​

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶ್ರೀಮತಿ ಲೀಲಾವತಿ ಆರ್​.ಚರಂತಿಮಠ ಪಬ್ಲಿಕ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ 17 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಗದಗ ನಗರದ ಜಗದ್ಗುರು ತೋಂಟದಾರ್ಯ ವಸತಿ ಶಾಲೆ ಬಾಲಕರ ತಂಡವು ಧಾರವಾಡದ ಕೆಲಗೇರಿಯ ಜೆಎಸ್​ಎಸ್​ ಪಬ್ಲಿಕ್​ ಶಾಲೆ ತಂಡವನ್ನು ಮಣಿಸಿ ಚಾಂಪಿಯನ್​ ಆಗಿದೆ.

ಧಾರವಾಡ ಮತ್ತು ಗದಗ ಜಿಲ್ಲೆಯ ಸಿಬಿಎಸ್​ಇ ಪಠ್ಯಕ್ರಮ ಆಧಾರಿತ ಶಾಲೆಗಳ ಪ್ರಾಂಶುಪಾಲರ ಒಕ್ಕೂಟವಾದ ಹು-ಧಾ ಉತ್ತರ ಕರ್ನಾಟಕ ಸಹೋದಯ (ಎಚ್​ಡಿಎನ್​ಕೆಎಸ್​) ಸಂಘಟನೆ ಸಹಯೋಗದಲ್ಲಿ ಆತಿಥೇಯ ಲೀಲಾವತಿ ಆರ್​. ಚರಂತಿಮಠ ಪಬ್ಲಿಕ್​ ಶಾಲೆ ಪಂದ್ಯಾವಳಿಯನ್ನು ಆಯೋಜಿತ್ತು.

ಇದಕ್ಕೂ ಪೂರ್ವದಲ್ಲಿ ಸ್ವಯಮ್​ ಕಠಾರೆ ಹಾಗೂ ರಜನಿ ಪಾಟೀಲ ಪಂದ್ಯಾವಳಿ ಉದ್ಘಾಟಿಸಿದರು. ಶಾಲೆ ಸಂಸ್ಥಾಪಕ ಅಧ್ಯ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕಬಡ್ಡಿ ಅಸೋಸಿಯೇಶನ್​ ಅಧ್ಯಕ್ಷ ವಿ.ಆರ್​. ಹಾದಿಮನಿ, ಶಾಲೆ ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ, ಶಾಲೆ ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ, ಧಾರವಾಡ, ಗದಗ ಜಿಲ್ಲೆ ಕ್ರೀಡಾಪಟುಗಳು, ಇತರರು ಇದ್ದರು.

ವೃತ್ತ ಅರಣ್ಯಾಧಿಕಾರಿ ನಾಗೇಶ ಕಾಡದೇವರಮಠ, ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ತರಬೇತುದಾರ ರಂಗನಾಥ, ಹಿರಿಯ ವಕೀಲ ಅರುಣ ಚರಂತಿಮಠ ವಿಜೇತರಿಗೆ ಬಹುಮಾನ ವಿತರಿಸಿದರು.