ಜಿಲ್ಲೆ

ಕಾಯಕ ಬಹಳ ವೈಶಿಷ್ಠ: ತೋಂಟದ ಸಿದ್ಧರಾಮ ಶ್ರೀ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಬಸವಾದಿ ಶಿವಶರಣರು ಕಾಯಕಕ್ಕೆ ಕೊಟ್ಟಿರುವ ಸ್ಥಾನಮಾನ ಬಹಳ ದೊಡ್ಡದು. ಗುರು, ಲಿಂಗ, ಜಂಗಮಕ್ಕಿಂತಲೂ ಕಾಯಕ ಬಹಳ ವೈಶಿಷ್ಠವಾದದ್ದು ಎಂದು ತೋಂಟದ ಸಿದ್ಧರಾಮ ಶ್ರೀ ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಯಕದಿಂದ ಒಬ್ಬ ವ್ಯಕ್ತಿ ಭಗವಂತನಿಗೆ ಪ್ರೀಯನಾಗುತ್ತಾನೆ ಮತ್ತು ಭಕ್ತನಾಗುತ್ತಾನೆ ಎಂದು 12 ನೇ ಶತಮಾನದಲ್ಲಿ ಶರಣರು ಹೇಳಿದ್ದಾರೆ. ಸತ್ಯಶುದ್ಧ ಪ್ರಾಮಾಣಿಕತೆಯನ್ನು ಕಾಯಕದಿಂದ ಗಳಿಸಬೇಕು. ಕಾಯಕಕ್ಕೆ ತಕ್ಕಷ್ಟೇ ಪ್ರತಿಲ ಬಯಸಬೇಕು. ಕಾಯಕದಲ್ಲಿ ಆಸೆ ಇರಬಾರದು. ಆಸೆಯೆಂಬುದು ಭವದ ಬೀಜ. ಆಸೆಯಿಂದ ಕಾಯಕ ಮಾಡಿದರೆ ಮುಕ್ತಿ, ಲಿಂಗಾಂಗ ಸಾಮರಸ್ಯ, ಮೋ ಲಭ್ಯವಾಗುವುದಿಲ್ಲ ಎಂದು ಶರಣರು ತಿಳಿಸಿದ್ದಾರೆ ಎಂದು ಶ್ರೀಗಳು ಹೇಳಿದರು.
ಕಾಯಕ ಮತ್ತು ದಾಸೋಹ ಕುರಿತು ಜಿ. ವಿ. ಮಂಜುನಾಥ ಅವರು ಉಪನ್ಯಾಸ ನೀಡಿದರು. ವಚನಗಳು ಶರಣರ ಅನುಭವದ ನುಡಿಗಳಾಗಿವೆ. ಶರಣರ ದೃಷ್ಟೀಕೋನದಲ್ಲಿ ಜಂಗಮ ಎಂದರೆ ಅನಂತವಾದುದು. ಚಲನಶೀಲವಾದುದು. ಸತ್ಯ ಶುದ್ಧ ಕಾಯಕ ಕೈಕೊಂಡಂತಹ ಸಮಯದಲ್ಲಿ ಆ ಕಾಯಕ ಕೈಲಾಸವಾಗುವುದು. ಕಾಯಕದಲ್ಲಿ ನಿರತರಾದಾಗ ಗುರು, ಲಿಂಗ, ಜಂಗಮವನ್ನಾದರೂ ಮರೆಯಬೇಕು ಎಂದು ಶರಣರು ಹೇಳಿದ್ದಾರೆ ಎಂದು ಮಂಜುನಾಥ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಅಕ್ಕಿ ಕೊಟ್ರಪ್ಪನವರು, ಅಂದಾನಪ್ಪ ಶಾಂತಪ್ಪ ಚವಡಿ, ಶೇಖಣ್ಣ ಕಳಸಾಪುರ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ ಇತರರು ಇದ್ದರು.