ಜಿಲ್ಲೆ

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಕಂಚಿನ ಪುತ್ಥಳಿ ಸ್ಥಾಪಿಸಲು ತೀರ್ಮಾನ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಭಾವೈಕ್ಯತೆಗೆ ಹರಿಕಾರರಾಗಿದ್ದ ತೋಂಟದ ಸಿದ್ಧಲಿಂಗ ಶ್ರೀಗಳು ಕಂಚಿನ ಪುತ್ಥಳಿಯನ್ನು ಗದುಗಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕೆಂಬುದು ತೀರ್ಮಾನಿಸಲಾಗಿದೆ ಎಂದು ತೋಂಟದಾರ್ಯ ನೌಕರರ ಪತ್ತಿನ ಸಹಕಾರಿ ಸಂದ ಅಧ್ಯಕ್ಷ ಎಸ್​.ಎಸ್​. ಪಟ್ಟನಶೆಟ್ಟಿ ಹೇಳಿದರು.
ಇತ್ತೀಚೆಗೆ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿದ ಸಂದ ವಾಷಿರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂವು ಶ್ರೀಮಠದ ದಾಸೋಹಕ್ಕಾಗಿ 1 ಕೋಟಿ ರೂ.ಗಳ ಸ್ಥಿರನಿಧಿ ಇಡಲಾಗಿದೆ. ಅದರಂತೆ ಪೂಜ್ಯರು ಲಿಂಗೈಕ್ಯರಾದ ನಂತರ ಅವರ ಸ್ಮರಣಾರ್ಥ ಪ್ರಾರಂಭಗೊಂಡ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರಿಯ ಪ್ರಶಸ್ತಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಸಮಿತಿಗೆ 1 ಕೋಟಿ ದೇಣಿಗೆ ಸಂಗ್ರಹವಾಗಿದೆ. ಈ ದೇಣಿಗೆಯನ್ನು ಠೇವಣಿ ಇಡುವ ಮೂಲಕ ಬಂದ ಆದಾಯದಲ್ಲಿ ಶ್ರೀಗಳ ಸ್ಮಾರಕ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಜಿ. ಎಂ. ಕೋಟ್ಯಾಳ, ಪಿ. ಎ. ಹೇಮಗಿರಿಮಠ, ವಿಜಯಕುಮಾರ ಮಾಲಗಿತ್ತಿ, ಕೊಟ್ರೇಶ ಮೆಣಸಿನಕಾಯಿ, ವಿಶ್ವಾಸ ಶಿಂಧೆ, ಐ. ಬಿ. ಬೆನಕೊಪ್ಪ, ದೊಡ್ಡಬಸಪ್ಪ ಚಿತ್ರಗಾರ ಇತರರು ಇದ್ದರು.