ಅಥಣಿ: ನಿತ್ಯ ಪರಿಶ್ರಮ, ಸತತ ಅಧ್ಯಯನ, ಏಕಾಗ್ರತೆಯಿಂದ ಓದಿ-ದಾ-ಗ ಸ್ಪರ್ಧಾತ್ಮಕ ಪರೀಕ್ಷೆಯ-ಲ್ಲಿ ಉ-ತ್ತೀ-ರ್ಣ-ರಾ-ಗ-ಲು ಸಾಧ್ಯ. ನಾಳೆಯ ಕೆಲಸ ಇಂದೇ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಡಾ.ಎಸ್.ಐ.ಕುಂದಗೋಳ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಎಂಎಸ್ ಮಹಾವಿದ್ಯಾಲಯದಲ್ಲಿ ಆಂತರಿಕ ಭರವಸೆ ಕೋಶದಡಿ ಭೌತಶಾಸಣಉ, ಗಣಿತಶಾಸಣಉ ಮತ್ತು ರಸಾಯನಶಾಸಣಉ ವಿಭಾಗದ ಸಹಯೋಗದಲ್ಲಿ ಶ-ನಿ-ವಾರ ಹಮ್ಮಿ-ಕೊಂಡಿದ್ದ ಜಾಮ್ ಪರೀೆ ತಿಳಿವಳಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಶಿವಾನಂದ ಹೊಸಮನಿ ಮಾತನಾಡಿ, ಬದಲಾವಣೆಗಾಗಿ ನಾಳೆಯವರೆಗೂ ಕಾಯು-ವು-ದ-ನ್ನು ಬಿಟ್ಟು, ಗುರಿಯಡೆಗೆ ಸಾಗಿ ಸಾಧ-ನೆ ಮಾಡ-ಬೇ-ಕು ಎಂದರು.
ಪ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ ಮಾತ-ನಾ-ಡಿ, ಯಶಸ್ಸಿಗೆ ಜ್ಞಾನ ಮತ್ತು ಅನುಭವ ಮುಖ್ಯ-ವಾ-ಗಿ-ವೆ. ಆದ್ದ-ರಿಂದ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಡಾ. ಪ್ರಶಾಂತ ಮಗದುಮ, ಸಹನಾ ಕಟ್ಟಿಮನಿ ಪ್ರಾರ್ಥಿಸಿದರು. ಪ್ರೊ.ಎಂ.ಎಂ.ಹೊಳ್ಳಿಯವರ ಸ್ವಾಗತಿಸಿದರು. ಪ್ರೊ.ಕೆ.ನಾಗಿರೆಡ್ಡಿ ಪರಿಚಯಿಸಿದರು. ಡಾ.ಜಯಣ್ಣ ವಂದಿಸಿದರು. ಸಾವಿತ್ರಿ ಯಲ್ಲಟ್ಟಿ ನಿರೂಪಿಸಿದ-ರು.