ಅರಕಲಗೂಡು : ಮಲ್ನಾಡ್ ಸ್ಟಾರ್ ಸಿಂಗರ್ಸ್ ವತಿಯಿಂದ ಇದೇ ಮೊದಲ ಬಾರಿಗೆ ಗಾಯಕ- ಗಾಯಕಿಯರಿಗೆ ಲಿಂಬಿಂಗ್ ಆಡಿಷನ್ ಗಾಯನ ಸ್ಪರ್ಧೆಯನ್ನು ಆ.10 ಮತ್ತು 11ರಂದು ಬೆಳಗ್ಗೆ 9 ಗಂಟೆಗೆ ಮಲ್ಲಿಪಟ್ಟಣದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಗಾಯಕ ಗಂಗಾಧರ್ ತಿಳಿಸಿದರು.
6-17 ವರ್ಷದವರೆಗಿನ ಕಿರಿಯರ ವಿಭಾಗದಲ್ಲಿ ವಿಜೇತರದವರಿಗೆ ಮೊದಲನೇ ಬಹುಮಾನವಾಗಿ 5 ಸಾವಿರ ರೂ, 2ನೇ ಬಹುಮಾನವಾಗಿ 3 ಸಾವಿರ ರೂ., 3ನೇ ಬಹುಮಾನವಾಗಿ 2 ಸಾವಿರ ರೂ., 4ನೇ ಮತ್ತು 5ನೇ ಸ್ಥಾನ ಪಡೆದವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ವಿಭಾಗಕ್ಕೆ 200 ರೂ. ಪ್ರವೇಶ ಶುಲ್ಕವಿರುತ್ತದೆ. ಹಾಗೆಯೇ 18 ವರ್ಷ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ವಿಜೇತರಿಗೆ ಮೊದಲನೇ ಬಹುಮಾನವಾಗಿ 5 ಸಾವಿರ ರೂ., 2ನೇ ಬಹುಮಾನವಾಗಿ 3 ಸಾವಿರ ರೂ., 3ನೇ ಬಹುಮಾನವಾಗಿ 2 ಸಾವಿರ ರೂ., 4ನೇ ಮತ್ತು 5ನೇ ಸ್ಥಾನ ಪಡೆದವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ವಿಭಾಗಕ್ಕೆ 300 ರೂ. ಪ್ರವೇಶ ಶುಲ್ಕವಿರಲಿದೆ ಎಂದರು.
ಸ್ಪರ್ಧಿಗಳು ಕಡ್ಡಾಯವಾಗಿ ಅಧಾರ್‌ಕಾರ್ಡ್ ತರಬೇಕು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಗೂ ಪ್ರಶಂಸನಾಪತ್ರ ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಗಾಯಕ ರವಿ ಇದ್ದರು.