ನೆಲಮಂಗಲ ಸಮೀಪದ ಅರಿಶಿಣಕುಂಟೆಯ ಆಂಜನೇಯಸ್ವಾಮಿ ದೇವಾಲಯಕ್ಕೆ ಶಾಸಕ ಎನ್.ಶ್ರೀನಿವಾಸ್ ಭೇಟಿ ನೀಡಿ ದೇವರ ದರ್ಶನ ಪಡೆದರು. ನಗರಸಭೆ ಅಧ್ಯಕ್ಷ ಎನ್.ಗಣೇಶ್, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಬಿ.ಜಿ.ವಾಸು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ ಇದ್ದರು. 
ಜಿಲ್ಲೆ

ನಾಳೆ ಅರಿಶಿಣಕುಂಟೆಯ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

ಶ್ರೀರಾಮ ನವಮಿ ಪ್ರಯುಕ್ತ ಆಯೋಜನೆ -ದೇಗುಲದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳಿಗೆ ಚಾಲನೆ

ನೆಲಮಂಗಲ: ಶ್ರೀರಾಮ ನವಮಿ ಪ್ರಯುಕ್ತ ಆಂಜನೇಯಸ್ವಾಮಿ ದೇವಾಲಯದಲ್ಲಿ ಕುಂಭಾಭಿಷೇಕ, ಶ್ರೀ ಸೀತಾರಾಮಲಕ್ಷ್ಮಣ ಸಮೇತ ಆಂಜನೇಯಸ್ವಾಮಿ ಜಾತ್ರಾಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರಕಿದೆ.

ಅರಿಶಿಣಕುಂಟೆಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಕುಂಭಾಭಿಷೇಕ, ಶ್ರೀ ಸೀತಾರಾಮಲಕ್ಷ್ಮಣ ಸಮೇತ ಶ್ರೀ ಅಂಜನೇಯಸ್ವಾಮಿ ಜಾತ್ರಾ ಬ್ರಹ್ಮರಥೋತ್ಸವ ನಡೆಯಲಿದ್ದು, ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಗಳಿಗೆ ಗಣ್ಯರು ಚಾಲನೆ ನೀಡಿದರು.

ಶುಕ್ರವಾರ ಬೆಳಗ್ಗೆ ಗಣಪತಿಪೂಜೆ, ಪುಣ್ಯಾಹ, ದೇವತಾ ಪ್ರಾಥನೆ, ಬ್ರಹ್ಮಕಳಸ ಸ್ಥಾಪನೆ ಹೋಮ, ಕಾಲಾವೃದ್ಧಿಹೋಮ ನಡೆದಿದ್ದು, ಏ.5ರಂದು ಶ್ರೀ ಆಂಜನೇಯಸ್ವಾಮಿಗೆ ಪಂಚಾಮೃತಾಭಿಷೇಕ, ಸೂಕ್ತಹೋಮ, ಸಂಜೆ 5.30ರಿಂದ ಗೋಧೂಳಿ ಮುಹೂರ್ತದಲ್ಲಿ ಶ್ರೀ ಸೀತಾರಾಮಕಲ್ಯಾಣೋತ್ಸವ, 6ರಂದು ರಾಮ ನವಮಿ ಪ್ರಯುಕ್ತ ಬೆಳಗ್ಗೆ 11 ಗಂಟೆಗೆ ಶ್ರೀ ಸೀತಾರಾಮಲಕ್ಷ್ಮಣ ಸಮೇತ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು ಮಾಹಿತಿ ನೀಡಿದ್ದಾರೆ.

ಗಣ್ಯರ ಭೇಟಿ: ದೇವಾಲಯಕ್ಕೆ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಶಾಸಕ ಎನ್.ಶ್ರೀನಿವಾಸ್ ಸೇರಿ ಅನೇಕ ಗಣ್ಯರು ಭೇಟಿ ಟಿ ನೀಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಚಂದ್ರಕುಮಾರ್, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ವೀರಶೈವ ಮಹಾಸಭಾ ಗ್ರಾಮಾಂತರ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಅಂಜಿನಪ್ಪ, ಸದಸ್ಯ ರಾಮ ಕೃಷ್ಣಪ್ಪ, ಬೈರೇಗೌಡ, ರಾಜಣ್ಣ, ನೀಲಕಂಠ, ತಿರುಮಲೇಗೌಡ, ಕಾವ್ಯ, ಹನುಮಂತಮ್ಮ ಉಪಸ್ಥಿತರಿದ್ದರು.

ಊರಿನಲ್ಲಿ ದೇವಸ್ಥಾನಗಳಿದ್ದರೆ ಉತ್ತಮ ಸಂಸ್ಕಾರ ಬೆಳೆಯಲಿದೆ. ಸ್ನಾನ ಮಾಡಿದರೆ ದೇಹವಷ್ಟೇ ಶುಚಿಯಾಗುತ್ತದೆ. ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದರಿಂದ ಮನಸ್ಸು ಶುದ್ಧಿಯಾಗುತ್ತದೆ. ದೇವರ ದರ್ಶನದಿಂದ ಅನಾಚಾರಗಳು ದೂರವಾಗಲಿವೆ. -ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷ ಪ್ರತಿ ಹಳ್ಳಿಗೊಂದು ದೇವಾಲಯ, ಸಮುದಾಯ ಭವನಗಳಿರಬೇಕು. ದೇವಾಲಯಗಳು ಜನರನ್ನು ಒಟ್ಟುಗೂಡಿಸಿ ಸಾಮರಸ್ಯ ಮೂಡಿಸಿದರೆ ಸಮುದಾಯ ಭವನಗಳು ಹಳ್ಳಿಗಳಲ್ಲಿ ನಡೆಯುವಂತಹ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿಕ್ಕೆ ಅನುಕೂಲವಾಗಲಿದೆ. -ಎನ್.ಶ್ರೀನಿವಾಸ್ ಶಾಸಕ