ಖಾಸ್ಗತ ಶಿವಯೋಗಿಗಳ * ವಿರಕ್ತ ಶಿವಯೋಗಿಗಳ ಭಾವಚಿತ್ರ 
ಜಿಲ್ಲೆ

ನಾಳೆ ಶ್ರೀ ಖಾಸ್ಗತ, ವಿರಕ್ತ ಶ್ರೀಗಳ ಪುಣ್ಯಸ್ಮರಣೋತ್ಸವ

ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಇದೇ ಸೆ. 22 ರಂದು ಸಂಜೆ 7 ಗಂಟೆಗೆ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ 128ನೇ ಹಾಗೂ ಶ್ರೀ ವಿರಕ್ತ ಮಹಾಶಿವಯೋಗಿಗಳ 10ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಭೆ ಕಾರ್ಯಕ್ರಮ ಜರುಗಲಿದೆ.

ಈ ಧರ್ಮಸಭೆ ದಿವ್ಯ ಸಾನಿಧ್ಯವನ್ನು ಇಂಗಳೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಹುಣಶ್ಯಾಳದ ಶ್ರೀ ಆನಂದ ದೇವರು ವಹಿಸುವರು. ಪ್ರವಚನಕಾರ ವೇ.ಬಂಡಯ್ಯ ಶಾಸ್ತ್ರೀಗಳು ಉಪಸ್ಥಿತರಿರುವರು.

ರಾತ್ರಿ 9 ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ವಹಿಸುವರು. ಉದ್ಘಾಟನೆಯನ್ನು ಸಂಗೀತ ಶಿಕ ಮಲ್ಲಿಕಾರ್ಜುನ ಭಜಂತ್ರಿ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಕೆಂಭಾವಿ ಸಂಗೀತ ಶಿಕ ಬಸವರಾಜ ಭಂಟನೂರ, ಹಿರಿಯ ಪತ್ರಕರ್ತ ಜಿ.ಟಿ. ೂರ್ಪಡೆ, ಈಶ್ವರ ಬಡಿಗೇರ ಆಗಮಿಸುವರು. ತಬಲಾ ವಾದಕರಾಗಿದ್ದ ದಿ. ಮಡಿವಾಳಪ್ಪ ಮಂದೇವಾಲಿ ಅವರಿಗೆ ಮರಣೋತ್ತರ ವಿರಕ್ತಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಧಾರವಾಡದ ರಂಗಾಯಣದ ನಿದೇರ್ಶಕ ರಾಜು ತಾಳಿಕೋಟಿ, ಮಲ್ಲಿಕಾರ್ಜುನ ಬೆನಕನಳ್ಳಿ, ಶಿವಾನಂದ ಬಡಿಗೇರ, ಪ್ರೇಮಾ ಶೆಟ್ಟಿ, ಅವರಿಗೆ ವಿರಕ್ತಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್​.ಎಸ್​. ಗಡೇದ, ಡಾ. ಪರಶುರಾಮ ಕಟ್ಟಿಸಂಗಾವಿ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.