Award ceremony, official ceremony tomorrow 
ಜಿಲ್ಲೆ

ನಾಳೆ ಶಾಲೆ-ಕಾಲೇಜುಗಳ ಕ್ರೀಡಾಕೂಟ

ಗಿರೀಶ ಸಗರ

ವಿಜಯಪುರ: ಡಾ. ಸಿ.ಆರ್​. ಬಿದರಿ ಸ್ಮರಣಾರ್ಥ ಬಿಎಲ್​ಡಿಇ ಸಂಸ್ಥೆಯ ವಿವಿಧ ಶಾಲೆ& ಕಾಲೇಜುಗಳ ಕ್ರೀಡಾಕೂಟ&2025ಕ್ಕೆ ಫೆ. 1 ರಂದು ನಗರದಲ್ಲಿ ನಡೆಯಲಿದ್ದು, ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಬಿಎಲ್​ಡಿಇ ಡೀಮ್ಡ್​ ವಿವಿಯ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಗ್ಗೆ 10ಕ್ಕೆ ಕ್ರೀಡಾಕೂಟ ಪ್ರಾರಂಭವಾಗಲಿದೆ.

ಆಶಾ ಎಂ. ಪಾಟೀಲ, ಬಿಎಲ್​ಡಿಇ ಡೀಮ್ಡ್​ ವಿವಿ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಇನಾಮದಾರ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಉಪಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ, ಕ್ರೀಡಾ ಸಮಿತಿ ಉಪಾಧ್ಯ ಡಾ. ಗಿರೀಶ ಕುಲ್ಲೊಳ್ಳಿ, ಆಡಳಿತಾಧಿಕಾರಿಗಳಾದ ವಿ.ಎಸ್​. ಬಗಲಿ, ಪ್ರೊ. ಎಸ್​.ಎಚ್​. ಲಗಳಿ, ಐ.ಎಸ್​. ಕಾಳಪ್ಪನವರ, ಬಿ.ಆರ್​. ಪಾಟೀಲ ಉಪಸ್ಥಿತಿ ವಹಿಸುವರು.

ಲಪತಿ ಡಾ. ಆರ್​.ಎಸ್​. ಮುಧೋಳ ಅಧ್ಯತೆ ವಹಿಸುವರು.

ಕ್ರೀಡಾಕೂಟವು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪಿಯುಸಿ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಂಟಿಸಲಾಗಿದ್ದು, ಸಂಸ್ಥೆಯ 66 ವಿವಿಧ ಕಾಲೇಜುಗಳ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಕ್ರೀಡಾಕೂಟದಲ್ಲಿ ವೇಗದ ಓಟಗಾರರಿಗೆ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಒಟ್ಟು 10 ಚಿನ್ನದ ಪದಕಗಳನ್ನು ವಿತರಿಸಲಾಗುತ್ತದೆ. ಸಂಜೆ ನಡೆಯಲಿರುವ ಕ್ರೀಡಾಕೂಟದ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯೇಂದ್ರ ಬಿದರಿ ಭಾಗವಹಿಸಲಿದ್ದಾರೆ. ಆಶಾ ಎಂ. ಪಾಟೀಲ, ಡಾ. ವೈ.ಎಂ. ಜಯರಾಜ, ಡಾ. ಆರ್​.ವಿ. ಕುಲಕರ್ಣಿ, ಡಾ. ರಾಜೇಶ ಹೊನ್ನುಟಗಿ, ಡಾ. ಆರ್​.ಸಿ. ಬಿದರಿ, ಡಾ. ಶೈಲಜಾ ಬಿದರಿ, ಡಾ. ಸುಮಂಗಲಾ ಪಾಟೀಲ, ಡಾ. ಗಿರೀಶ ಕುಲ್ಲೊಳ್ಳಿ ಉಪಸ್ಥಿತಿ ವಹಿಸುವರು. ಡಾ. ಆರ್​.ಎಸ್​. ಮುಧೋಳ ಅಧ್ಯತೆ ವಹಿಸುವರು ಎಂದು ಡೀಮ್ಡ್​ ವಿವಿ ಸಹಾಯಕ ಕ್ರೀಡಾ ನಿರ್ದೇಶಕಿ ಡಾ. ಮಹಾದೇವಿ ವಾಲಿ ಮತ್ತು ಸಂಸ್ಥೆ ಕ್ರೀಡಾ ನಿರ್ದೇಶಕ ಎಸ್​.ಎಸ್​. ಕೋರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.