ಜಿಲ್ಲೆ

ಮಹಾಂತಪ್ಪಗಳ ಸ್ಮರಣೋತ್ಸವ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ತ್ರಿವಿಧ ದಾಸೋಹಮೂರ್ತಿ ಲಿಂ. ಶ್ರೀ ಮಹಾಂತಪ್ಪಗಳ 30ನೇ ಸ್ಮರಣೋತ್ಸವ ಸಮಾರಂಭವನ್ನು ಡಾ.ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಜು. 8ರಂದು ಮುರಘಾಮಠದಲ್ಲಿ ಏರ್ಪಡಿಸಲಾಗಿದೆ.
ಬೆಳಗ್ಗೆ 10.30ಕ್ಕೆ ಮಹಾಂತಪ್ಪಗಳ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ಶ್ರೀಮಠದ ಆವರಣದಲ್ಲಿ ಜರುಗಲಿದೆ. ಇದರಲ್ಲಿ ಹರಗುರು ಚರಮೂರ್ತಿಗಳು ಪಾಲ್ಗೊಳ್ಳುವರು. ನಂತರ ಮಠದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಉಪ್ಪಿನ ಬೆಟಗೇರಿ ವಿರಕ್ತಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಅಮ್ಮಿನಭಾವಿ ಪಂಚಗೃಹ ಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ವೈಶುದೀಪ ಪ್ರತಿಷ್ಠಾನದ ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಸಮಾರಂಭ ಉದ್ಘಾಟಿಸುವರು. ಉಪ ಸಭಾಪತಿ ರುದ್ರಪ್ಪ ಲಮಾಣಿ ಅತಿಥಿಯಾಗಿ ಪಾಲ್ಗೊಳ್ಳುವರು. ಪ್ರೊ.ದಾನಯ್ಯ ಹಿರೇಮಠ ಉಪನ್ಯಾಸ ನೀಡಲಿದ್ದು, ಅಯ್ಯಪ್ಪಯ್ಯ ಹಲಗಲಿಮಠ ವಚನ ಸಂಗೀತ ನಡೆಸಿಕೊಡುವರು ಎಂದು ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.