ಕಟಕೋಳ: ಸಮೀಪದ ಎಂ. ಚಂದರಗಿಯಲ್ಲಿ ಜು.9 ಮತ್ತು 10ರಂದು ಗುರುಪೂರ್ಣಿಮೆ ನಿಮಿತ್ತ ಗುರು-ಭಕ್ತರ ಸಮಾವೇಶ ಜರುಗಲಿದೆ. ಸ್ಥಳೀಯ ಸಂಸ್ಥಾನ ಹಿರೇಮಠದ ವೀರಭದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. 9ರಂದು ಬೆಳಗ್ಗೆ ಭಕ್ತರಿಗೆ ಲಿಂಗದೀಕ್ಷೆ ಜಂಗಮ ವಟುಗಳಿಗೆ ಅಯ್ಯಚಾರ ಜರುಗುವುದು.
ಸತ್ತಿ ಗ್ರಾಮದ ಭಕ್ತರಿಂದ ಪಾದಯಾತ್ರೆ ಮಂಗಲೋತ್ಸವ ನಂತರ ಪ್ರಸಾದ ವ್ಯವಸ್ಥೆ ಇರುವುದು. ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮತ್ತು ನರಸಾಪುರದ ಮರುಳಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಿಜಗುಪ್ಪಿ ಹರ್ಲಾಪುರದ ರೇಣುಕ ಶಿವಯೋಗಿ ಶಿವಾಚಾರ್ಯರರಿಗೆ ಶ್ರೀ ಡಾ.ವೀರಸೋಮೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಸಕ ಅಶೋಕ ಪಟ್ಟಣ ಉದ್ಘಾಟಿಸುವರು. ಟಿ.ಪಿ ಮನ್ನೋಳಿ ಅಧ್ಯಕ್ಷತೆ ವಹಿಸುವರು.
ಮುಖ್ಯಅತಿಥಿಯಾಗಿ ಶಾಸಕ ಮಹಾಂತೇಶ ಕೌಜಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ಬಿ.ಡಿ. ಹಿರೇಮಠ, ಸಿ.ಎ. ದೇಸಾಯಿ, ಎಸ್.ಸಿ. ಪಾಟೀಲ, ಶಾಸನಗೌಡ ಪಾಟೀಲ ಇತರರಿಗೆ ಗುರುರಕ್ಷೆ ನೀಡಲಾಗುವುದು ಎಂದು ಮಠದ ಆಡಳಿತಾಧಿಕಾರಿ ಡಿ.ವೈ. ಮಾಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ