ಜಿಲ್ಲೆ

ನಾಳೆ ಭಕ್ತ ಕನಕದಾಸ ಜಯಂತ್ಯುತ್ಸವ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ಭಕ್ತ ಕನಕದಾಸ 538ನೇ ಜಯಂತ್ಯುತ್ಸವ ಸಮಾರಂಭವು ತಾಲೂಕು ಪ್ರದೇಶ ಕುರುಬರ ಸಂ, ಹಾಲುಮತ ಮಹಾಸಭಾ ಮತ್ತು ತಾಲೂಕು ಕುರುಬ ನೌಕರರ ಸಂದ ನೇತತ್ವದಲ್ಲಿ ನ.8ರಂದು ವಿಜಂಭಣೆಯಿಂದ ಜರುಗಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂದ ತಾಲೂಕು ಅಧ್ಯ ಪಡಿಯಪ್ಪ ಕ್ವಾರಿ ಹೇಳಿದರು.

ಪಟ್ಟಣದ ಪ್ರೆಸ್​ಕ್ಲಬ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ಕ್ಕೆ ಆರಂಭವಾಗುವ ಮೆರವಣಿಗೆಯು ಪ್ರಗತಿ ಸಭಾಭವನಕ್ಕೆ ಆಗಮಿಸಿ ಸಮಾವೇಶಗೊಳ್ಳಲಿದೆ. ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮದ ನಂತರ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ.

ಸಿದ್ದೇಶ್ವರ ಸ್ವಾಮೀಜಿ, ಅಭಿನವ ಸಿದ್ಧರಾಯಜ್ಜನವರು, ಕಷ್ಣಾನಂದ ಸ್ವಾಮೀಜಿ, ಕರಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯೆ ಡಾ. ನಾಗಲಕ್ಷಿ$್ಮ ಚೌಧರಿ ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್​ ನಿರ್ದೇಶಕ ಮಲ್ಲಣ್ಣ ಯಾದವಾಡ ಸೇರಿ ವಿವಿಧ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಕರ್ನಾಟಕ ಪ್ರದೇಶ ಕುರುಬರ ಸಂದ ನಿರ್ದೇಶಕ ಅಶೋಕ ಮೆಟಗುಡ್ಡ, ಸೋಮಶೇಖರ ಶಿದ್ಲಿಂಗಪ್ಪನವರ, ಮಲ್ಲಪ್ಪ ಸೋಮಗೊಂಡ, ವಿಠ್ಠಲ ಜಟಗನ್ನವರ, ಕೆ.ಎಲ್​.ಕ್ವಾರಿ, ಎಂ.ಡಿ.ಮಟ್ಟಿನ, ಪಿ.ಕೆ.ಮೆಟ್ಟಿನ, ಸಿದ್ದಣ್ಣ ಮಕ್ಕನ್ನವರ, ಎನ್​.ಎ್​.ಚಂದರಗಿ, ಬಾಳನಗೌಡ ಬಾಗೋಜಿ ಇತರರಿದ್ದರು.