ಜಿಲ್ಲೆ

ನಾಳೆ ಆಯುರ್ವೇದ ಕಾಲೇಜ್ ಉದ್ಘಾಟನೆ

ಪ್ರಶಾಂತ ಹೂಗಾರ

ಮಾಂಜರಿ: ಚಿಕ್ಕೋಡಿ ತಾಲೂಕಿನ ಅಂಕಲಿಯ ಡಾ. ಎನ್.ಎ. ಮಗದುಮ್ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆ, ಸಿಬಿಎಸ್‌ಇ ಶಾಲಾ ಕಟ್ಟಡದ ಅಡಿಗಲ್ಲು, ಪದವಿ ಪ್ರದಾನ ಮತ್ತು ವರ್ಚುವಲ್ ಡಿಸ್ಕಶನ್ ಟೇಬಲ್ ಉದ್ಘಾಟನಾ ಸಮಾರಂಭ ಡಿ.23ರ ಬೆಳಗ್ಗೆ 9.30ಕ್ಕೆ ಜರುಗಲಿದೆ ಎಂದು ಶ್ರೀ ಗೋಮಟ್ಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಎ. ಮಗದುಮ್ ತಿಳಿಸಿದ್ದಾರೆ.

ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಎಸ್.ಬಿ. ಘಾಟಗೆ ಭಾಗವಹಿಸಲಿದ್ದಾರೆ ಎಂದರು.

ಡಿ.24ರಂದು ಬೆಳಗ್ಗೆ 9.30ಕ್ಕೆ ಅನಾಟಾಮಿ ವಿಭಾಗದ ಉದ್ಘಾಟನೆ ನಡೆಯಲಿದ್ದು, ಶಾಸಕರಾದ ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ರಾಜು ಕಾಗೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಿ. 23ರಿಂದ 25ರ ವರೆಗೆ ಸಂಜೆ 4 ಗಂಟೆಯಿಂದ ಗೋಮಟೋತ್ಸವ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಕ್ರಮ ಆಯೋಜಿಸಲಾಗಿದೆ. ಸಂಸ್ಥೆಯ ಟ್ರಸ್ಟಿ ಎಲ್.ಎನ್.ಮಗದುಮ್, ಕಾರ್ಯದರ್ಶಿ ಸುರೇಶ ಚೌಗುಲೆ ಸೇರಿ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ. ಪ್ರಾಂಶುಪಾಲರಾದ ಡಾ.ರಮೇಶ ಕೋನಕೇರಿ, ಎನ್.ಎಸ್.ನಿಡಗುಂದಿ, ಉಪ ಪ್ರಾಂಶುಪಾಲ ಡಾ.ರಾಮಗೌಡ ಪಾಟೀಲ ಇದ್ದರು.
ಅಂಕಲಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಡಾ.ಎನ್.ಎ.ಮಗದುಮ, ಎನ್.ಎಸ್.ನಿಡಗುಂದಿ, ರಾಮಗೌಡ ಪಾಟೀಲ ಇದ್ದಾರೆ.