ಹುಳಿಯಾರು: ಹುಳಿಯಾರಿನ ನಾಡ ಕಚೇರಿ ಮುಂಭಾಗದ ಮುಂಜಾನೆ ನಡೆಯುವ ಮಾರುಕಟ್ಟೆಯಲ್ಲಿ ಸುಂಕ ಸಂಗ್ರಹಿಸುವ ವಿಚಾರವಾಗಿ ರೈತರು ಮತ್ತು ಸುಂಕ ಸಂಗ್ರಹ ಗುತ್ತಿಗೆದಾರರ ನಡುವೆ ಶುಕ್ರವಾರ ಜಟಾಪಟಿ ನಡೆಯಿತು.
ರೈತರೇ ನೇರವಾಗಿ ನುಗ್ಗೆಕಾಯಿ, ಹಿತ್ತಲವರೆ, ಟೊಮ್ಯಾಟೊ ಹೀಗೆ ಅನೇಕ ಕೃಷಿ ಉತ್ಪನ್ನಗಳನ್ನು ಮುಂಜಾನೆ 6 ರಿಂದ 10 ಗಂಟೆಯವರೆಗೆ ಮಾರುತ್ತಿದ್ದಾರೆ. ಇಂತಹ ರೈತರಿಂದ ಪಪಂ ಸುಂಕ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಸಂದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಆೇಪ ವ್ಯಕ್ತಪಡಿಸಿದರು.
ಈ ಜಾಗ ಪಂಚಾಯಿತಿಯದ್ದಲ್ಲ. ಅಲ್ಲದೆ ಇಲ್ಲಿ ವ್ಯಾಪಾರ ಮಾಡುವ ರೈತರಿಗೆ ಪಂಚಾಯ್ತಿಯಿಂದ ನೀರು, ನೆರಳು, ಶೌಚಗೃಹ ಕೊಟ್ಟಿಲ್ಲ. ಹೀಗಿರುವಾಗ ಸುಂಕ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸುಂಕ ಸಂಗ್ರಹಗಾರ ಚನ್ನಕೇಶವ, ಪಂಚಾಯಿತಿಯಿಂದ ಹರಾಜು ಕೂಗಿಕೊಂಡಿದ್ದೇವೆ. ಮುಖ್ಯಾಧಿಕಾರಿಗಳೇ ಸುಂಕ ಸಂಗ್ರಹಿಸುವಂತೆ ಪತ್ರ ನೀಡಿದ್ದಾರೆ. ನಾವು ಯಾರಿಂದಲೂ ಬಲವಂತದಿಂದ ವಸೂಲಿ ಮಾಡುತ್ತಿಲ್ಲ. ರೈತರ ಸುಂಕ ಬಿಟ್ಟರೆ ದಿನಕ್ಕೆ 100 ರೂ.ನಂತೆ ತಿಂಗಳಿಗೆ 3 ಸಾವಿರ ರೂ. ನಷ್ಟವಾಗುತ್ತದೆ. ಇಲ್ಲಿ ವರ್ತಕರು ಸಹ ವ್ಯಾಪಾರ ಮಾಡುತ್ತಿದ್ದು, ಅವರಿಂದಲಾದರೂ ಸುಂಕ ಸಂಗ್ರಹಕ್ಕೆ ಅನುಮತಿ ಕೊಡಿ ಎಂದರು.
ಹೀಗೆ 1 ಗಂಟೆಗೂ ಹೆಚ್ಚು ಕಾಲ ಇಬ್ಬರ ನಡುವೆ ವಾಗ್ವಾದ ನಡೆಯಿತು. ರೈತರು ಯಾವುದೇ ಕಾರಣಕ್ಕೂ ಸುಂಕ ವಸೂಲಿಗೆ ಬಿಡೋದಿಲ್ಲ ಎಂದು ಪಟ್ಟು ಹಿಡಿದಾಗ ಕೊನೆಗೆ ರೈತನ ಮಾತಿನಂತೆ ನಾಡಕಚೇರಿ ಬಳಿ ನಡೆಯುವ ನಿತ್ಯ ಸಂತೆಯಲ್ಲಿ ಸುಂಕ ಸಂಗ್ರಹಿಸದಿರಲು ಗುತ್ತಿಗೆದಾರರು ನಿರ್ಧರಿಸಿದರು.
ತಾಲೂಕು ಕಾರ್ಯಾಧ್ಯಕ್ಷ ಕರಿಯಣ್ಣ, ಟಿ.ಎಸ್.ಪ್ರಶಾಂತ್, ಹನುಮಂತರಾಜ್ ಅರಸ್, ಬಿ.ಲಕ್ಷಿ$್ಮ, ಎಸ್.ಜಗದೀಶ್, ನೀರಾಈರಣ್ಣ, ರೇವಣ್ಣ, ಮಂಜುನಾಥ್, ಪುಷ್ಪಬಾಯಿ, ನಿಂಗಪ್ಪ, ಎಂ.ಶ್ರೀನಿವಾಸ್, ನಿಂಗಪ್ಪ, ಕೃಷ್ಣಮೂರ್ತಿ, ಲಿಂಗರಾಜು ಇದ್ದರು.