ಜಪಾನ್‌ನ ಟೋಕಿಯೊ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಶೈಕ್ಷಣಿಕ ಪ್ರತಿನಿಽಗಳು ಸಾಂಪ್ರದಾಯಿಕ ಸುರಂಗ ನೀರಿನ ವ್ಯವಸ್ಥೆಯನ್ನು ವೀಕ್ಷಿಸಿದರು.  
ಜಿಲ್ಲೆ

ಜಪಾನ್ ತಂಡದಿಂದ ಸುರಂಗ ನೀರಿನ ವ್ಯವಸ್ಥೆ ಅಧ್ಯಯನ TOKYO

ಪ್ರಮುಖ ಮುಖ್ಯಾಂಶಗಳು

  • ಸಾಂಪ್ರದಾಯಿಕ ಜಲ ಸಂರಕ್ಷಣೆ ವಿಧಾನಗಳ ವೀಕ್ಷಣೆ
  • ಮಾಣಿಮೂಲೆ, ಕಾಸರಗೋಡು ಭೇಟಿ
ಪುತ್ತೂರು: ಸಾಂಪ್ರದಾಯಿಕ ಸುರಂಗ ನೀರಿನ ವ್ಯವಸ್ಥೆ ಮತ್ತು ಕೃಷಿ ಪರಿಣಾಮ ಅಧ್ಯಯನಕ್ಕಾಗಿ ಜಪಾನ್‌ನ ಟೋಕಿಯೊ ಯೂನಿವರ್ಸಿಟಿ ಆ- ಅಗ್ರಿಕಲ್ಚರ್(ಟೋಕಿಯೊ ನೋಡೈ) ಶೈಕ್ಷಣಿಕ ಪ್ರತಿನಿಽಗಳ ತಂಡ ದ.ಕ. ಹಾಗೂ ಕಾಸರಗೋಡು ಭಾಗಕ್ಕೆ ಭಾನುವಾರ ಭೇಟಿ ನೀಡಿತು.
ದ.ಕ. ಜಿಲ್ಲೆಯ ಮಾಣಿಮೂಲೆ ಗೋವಿಂದ ಭಟ್ ಹಾಗೂ ಅಮೈ ಮಹಾಲಿಂಗ ನಾಯ್ಕ್ ನಿರ್ಮಿಸಿದ ಸುರಂಗ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿರುವ ವಿಶಿಷ್ಟ ಸುರಂಗ ನೀರಿನ ವ್ಯವಸ್ಥೆಗಳನ್ನು ತಂಡ ಅಧ್ಯಯನ ನಡೆಸಿತು.
ಕೆಂಪುಕಲ್ಲಿನ(ಲ್ಯಾಟರೈಟ್) ಬೆಟ್ಟ ಪ್ರದೇಶಗಳಲ್ಲಿ ಸ್ಥಳೀಯ ಕೃಷಿಯನ್ನು ಪೋಷಿಸುವಲ್ಲಿ ಮತ್ತು ನೀರು ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಈ ಸ್ಥಳೀಯ ನೀರಿನ ಮೂಲಗಳು ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ವಿಶ್ಲೇಷಿಸುವ ಗುರಿಯನ್ನು ತಂಡ ಹೊಂದಿದೆ. ಎರಡು ದಿನದಲ್ಲಿ ತಂಡವು ಕೃಷಿ ಫಾರ್ಮ್‌ಗಳಿಗೆ ಭೇಟಿ, ಸಂವಾದ, ಸುರಂಗ ಕೊರೆಯುವ ಪ್ರಕ್ರಿಯೆಯನ್ನು ಅಧ್ಯಯನ ನಡೆಸಲಿದೆ.   
ಟೋಕಿಯೊ ನೋಡೈ ಇಂಟರ್‌ನ್ಯಾಷನಲ್ ಅಗ್ರಿಕಲ್ಚರ್ ಆಂಡ್ ಫುಡ್ ಸ್ಟಡಿ ಫಾಕಲ್ಟಿಯ ಕಮಿಷನ್ಡ್ ಪ್ರೊಫೆಸರ್ ಪ್ರೊ.ಹೈಡ್ ಒಮೇ ತಂಡದ ನೇತೃತ್ವ ವಹಿಸಿದ್ದು, ಸಂಶೋಧಕರಾದ ಶಿಮ್ಯೋಜು ಕೋಶಿರೋ, ಕಟೋ ನಾವೋಕಿ, ಯುಗುಚಿ ಹಿಕಾರು ತಂಡದಲ್ಲಿದ್ದರು. ಕ್ಷೇತ್ರ ಅಧ್ಯಯನದ ಮಾರ್ಗದರ್ಶನವನ್ನು ನೀಲಂಬೂರು ಗವರ್ನಮೆಂಟ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು ಭೂಗೋಳ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಗೋವಿಂದನ್ ಕುಟ್ಟಿ ನೀಡಿದ್ದಾರೆ.