ಹುಬ್ಬಳ್ಳಿ: ಗುರುಸಾರ್ವಭೌಮರು ಕೃಪಾ ಸಾಗರರು. ಅಮೋಘ ಮಹಿಮಾನ್ವಿತರು. ಹರಿಸವೋತ್ತಮ ಸಾಧಕರು. ದೇವತೆಗಳನ್ನು ಸಂತೋಷಪಡಿಸಿದವರು. ಕಲಿಯುಗದ ಕಲ್ಪವೃಕ್ಷ ಕಾಮಧೇನುವೆಂದು ಪ್ರಸಿದ್ಧಿ ಪಡೆದವರು. ಇಂಥ ಮಹಿಮಾಪುರಷ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯಿಂದ ಮನುಕುಲದ ಕಷ್ಟಕಾರ್ಪಣ್ಯಗಳು ದೂರವಾಗುವವು ಎಂದು ಬ್ಯಾಂಕ್ ನಿವೃತ್ತ ಅಧಿಕಾರಿ ಜಯತೀರ್ಥ ನೀಲೋಗಲ್ ಹೇಳಿದರು.
ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಸಮೀಪದ ಸತ್ತೂರಿನ ವನಸಿರಿ ನಗರದಲ್ಲಿರುವ ಶ್ರೀ ಪಾಂಡುರಂಗ ಕುಲಕರ್ಣಿ ಅವರ ನಿವಾಸದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀ ಗುರು ಸರ್ವಭೌಮರ 352ನೇ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಹ್ಲಾದ ರಾಜರಾಗಿ, ವ್ಯಾಸರಾಜರಾಗಿದ್ದಾಗ ಭಗವಂತ ಇವರಿಗೆ ವಿಶೇಷವಾದ ವರವನ್ನು ಕೊಟ್ಟು ಅನುಗ್ರಹಿಸಿದ್ದೇ ರಾಯರು, ಕಲಿಯುಗದ ಕಾಮಧೇನು-ಕಲ್ಪವೃಕ್ಷವಾಗಲು ಕಾರಣ ಎಂದು ಬಣ್ಣಿಸಿದರು.
ಪ್ರಮುಖರಾದ ರಘೂತ್ತಮ ಅವಧಾನಿ, ಕೃಷ್ಣ ಹುನಗುಂದ, ಪ್ರೊ.ವಾಮನ ಬಾದ್ರಿ, ಪ್ರಕಾಶ ದೇಸಾಯಿ, ಪ್ರೊ.ಸಿ.ಕೆ. ಕುಲಕರ್ಣಿ, ಬದ್ರಿನಾಥ ಬೆಟಿಗೇರಿ, ಸಂಜೀವ ಗೊಳಸಂಗಿ, ರಮೇಶ ಅಣ್ಣಿಗೇರಿ, ಅನಿಲ್ ಹರಿಹರ, ಎಲ್.ವಿ. ಜೋಶಿ, ವಿಲಾಸ ಜೋಶಿ, ಕೇಶವ ಕುಲಕರ್ಣಿ, ವಿಲಾಸ ಶಬ್ನೀಸ ಇತರರು ಇದ್ದರು.