ತಾವರಗೇರಾದಲ್ಲಿ ತೆರೆಯಲಾದ ತೊಗರಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಬಂದ ರೈತರು ಟ್ರಾೃಕ್ಟರ್ ಸಹಿತ ಪಾಳೇ ಹಚ್ಚಿರುವುದು. 
ಜಿಲ್ಲೆ

ತೊಗರಿ ಮಾರಾಟಕ್ಕೆ ಮುಂದಾದ ರೈತರು

Kopala - Desk - Eraveni

ತಾವರಗೇರಾ: ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿಗೆ 8 ಸಾವಿರ ರೂ. ಬೆಂಬಲ ಬೆಲೆ ನಿಗದಿ ಪಡಿಸಿದ್ದು, ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ರೈತರು ಕೇಂದ್ರಕ್ಕೆ ಮುಗಿಬಿದ್ದಿದ್ದಾರೆ.

ಕೆಳೆದ ನವೆಂಬರ್, ಡಿಸೆಂಬರ್‌ನಲ್ಲಿ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ ವ್ಯಾಪಾರಸ್ಥರು 10-11 ಸಾವಿರ ರೂ.ಗೆ ಖರೀದಿಸಿದ್ದರು. ಬೆಳೆ ಹೆಚ್ಚಾಗಿದ್ದರಿಂದ ಬೆಲೆ ಕುಸಿಯಿತು. ಇದರಿಂದ ಬಹಳಷ್ಟು ರೈತರು ತೊಗರಿಗೆ ಬೆಲೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಏ.30 ನಿಗದಿಪಡಿಸಲಾಗಿದೆ.

ತಾವರಗೇರಾ ಹೋಬಳಿ ಭಾಗದ 3,500 ರೈತರು ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದಾರೆ. 46,000 ಕ್ವಿಂಟಾಲ್ ತೊಗರಿ ಕೇಂದ್ರಕ್ಕೆ ಮಾರಿದ್ದಾರೆ. 1,800 ರೈತರಿಗೆ ಹಣ ಪಾವತಿಸಲಾಗಿದೆ. ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ವೇರ್ ಹೌಸ್‌ಗೆ 92,000 ಚೀಲ ಸಾಗಿಸಲಾಗಿದೆ ಎಂದು ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ರಮೇಶ ಮೆಣೇದಾಳ ತಿಳಿಸಿದ್ದಾರೆ.