ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ತೊಗರಿ ಬೆಳೆಯ ಪ್ರಾತ್ಯಕ್ಷಿತೆ ನಡೆಯಿತು. ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಕೆ.ನವೀನ, ರೈತರಾದ ಲಚಮಪ್ಪ, ಸುರೇಶ, ಪಂಪಾಪತಿ, ಆದೇಶ, ದುರುಗೇಶ ಇತರರಿದ್ದರು. 
ಜಿಲ್ಲೆ

ತೊಗರಿ ಹೆಚ್ಚಳಕ್ಕೆ ಕುಡಿ ಚಿವುಟಿ

Kopala - Desk - Eraveni

ಕನಕಗಿರಿ: ತೊಗರಿ ಬಿತ್ತಿದ 40ರಿಂದ 45ದಿನಗಳಲ್ಲಿ ಬೆಳೆ ಮೇಲ್ಭಾಗದಲ್ಲಿ ಕುಡಿಯನ್ನು ಸುಮಾರು 5-6 ಸೆಂ.ಮೀ.ನಷ್ಟು ಚಿವುಟುವುದರಿಂದ ಶೇ.20ರಷ್ಟು ಇಳುವರಿ ಹೆಚ್ಚಾಗುತ್ತದೆ ಎಂದು ನವಲಿ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಕೆ.ನವೀನ ಹೇಳಿದರು.

ತಾಲೂಕಿನ ನವಲಿ ಗ್ರಾಮದ ಚಂದ್ರಪ್ಪ ಎನ್ನುವವರ ಜಮೀನಿನಲ್ಲಿ ರಾಷ್ಟ್ರೀಯ ಭದ್ರತಾ ಆಹಾರ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ತೊಗರಿ ಬೆಳೆಯ ಪ್ರಾತ್ಯಕ್ಷಿತೆಯಲ್ಲಿ ಮಾತನಾಡಿದರು.

ಬಿತ್ತನೆಯಾದ ನಿಗದಿತ ಸಮಯದಲ್ಲಿ ತೊಗರಿ ಬೆಳೆ ಚಿವುಟುವುದರಿಂದ ಗಿಡದಲ್ಲಿ ಕವಲುಗಳ ಸಂಖ್ಯೆ ಹೆಚ್ಚಾಗಿ ಕಾಯಿಗಳ ಅಧಿಕವಾಗುತ್ತವೆ. ಇದರಿಂದ ಇಳುವರಿಯಲ್ಲಿ ಶೇ.15-20ರಷ್ಟು ಹೆಚ್ಚಾಗುತ್ತದೆ. ಕುಡಿ ಚಿವುಟಲಿಕ್ಕೆ ಯಂತ್ರಗಳು ಸಹ ದೊರೆಯುತ್ತಿದ್ದು, ಅವುಗಳನ್ನು ಬೆಳೆಸಿಕೊಂಡು 40-45ದಿನಗಳಲ್ಲಿ ಚಿವುಟಿ ಹೆಚ್ಚಿನ ಇಳುವರಿ ಪಡೆಯಲು ಮುಂದಾಗಬೇಕು ಎಂದರು.

ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶಾರೂಫ ಪಾಷಾ, ವ್ಯವಸ್ಥಾಪಕ ಪ್ರದೀಪಕುಮಾರ, ಕೃಷಿ ಸಂಜೀವಿನಿ ಚಾಲಕ ಯಂಕಪ್ಪ, ರೈತರಾದ ಲಚಮಪ್ಪ, ಸುರೇಶ, ಪಂಪಾಪತಿ, ಆದೇಶ, ದುರುಗೇಶ, ಕೇಶ್ಯಾ ನಾಯ್ಕ, ಲಕ್ಷ್ಮಣ, ಯಲ್ಲಪ್ಪ, ಗರೀಬ್‌ಸಾಬ್ ಇತರರಿದ್ದರು.