ಚಿಕ್ಕಮ್ಯಾಗೇರಿಯಲ್ಲಿ ತೊಗರಿ ಬೆಳೆ ಬೆಂಕಿಗೆ ಆಹುತಿಯಾಗಿರುವುದು. 
ಜಿಲ್ಲೆ

ಶಾರ್ಟ್ ಸರ್ಕ್ಯೂಟ್‌ನಿಂದ ತೊಗರಿ ನಾಶ

ಯಲಬುರ್ಗಾ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತೊಗರಿ ಬೆಳೆ ಸಂಪೂರ್ಣ ಸುಟ್ಟ ಕರಕಲಾದ ಘಟನೆ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ರೈತ ನಾಗೇಶ ತಿಪ್ಪಣ್ಣ ಮುರಾರಿ ಅವರ ಎರಡು ಎಕರೆ ತೊಗರಿ ಬೆಳೆ ಸುಟ್ಟು ಭಸ್ಮವಾಗಿದೆ.

ಬೆಂಕಿ ನಂದಿಸಲು ಸುತ್ತಲಿನ ರೈತರು ಹರಸಾಹಸ ಪಟ್ಟರೂ ಪ್ರಯೋಜನವಾಗಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬರುವುದರೊಳಗಾಗಿ ಫಸಲು ಸುಟ್ಟಿತ್ತು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಅಳಲು ತೋಡಿಕೊಂಡರು.