ಜಿಲ್ಲೆ

ಇಂದು ವಿಟಿಯು 23ನೇ ಘಟಿಕೋತ್ಸವ ; ‌ಮೂವರಿಗೆ ಗೌರವ ಡಾಕ್ಟರೇಟ್

Belagavi - Ravi Arjun Gosavi

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆ.1ರಂದು ಬೆಳಗ್ಗೆ 11.30ಕ್ಕೆ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಜರುಗಲಿದೆ.

ಘಟಿಕೋತ್ಸವದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧಿಪತಿ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಡಾ.ಎ.ವಿ.ಎಸ್.ಮೂರ್ತಿ ಹಾಗೂ ಮೈಸೂರು ಮೆರ್ಕ್ಯಾನ್ ಟೈಲ್ ಕಂಪನಿಯ ಎಂಡಿ ಎಚ್.ಎಸ್.ಶೆಟ್ಟಿ ಅವರಿಗೆ  ‘ಡಾಕ್ಟರ್ ಆಫ್ ಸೈನ್ಸ್ ’ ಪದವಿ ಪ್ರದಾನ ಮಾಡಲಾಗುತ್ತಿದೆ.

550 ಪಿಎಚ್.ಡಿ 04 (ಎಂಎಸ್‌ಸಿ ಇಂಜಿನಿಯರಿಂಗ್) ಬೈ ರಿಸರ್ಚ್ ಮತ್ತು ಎರಡು ಇಂಟಿಗ್ರೇಟೆಡ್ ಡ್ಯುಯಲ್ ಪದವಿ ಸೇರಿದಂತೆ ಒಟ್ಟು 556 ಸಂಶೋಧನಾ ಪದವಿ ಹಾಗೂ ಬಿಇ, ಬಿ.ಟೆಕ್ ನಲ್ಲಿ 42,545 ಹಾಗೂ ಬಿ.ಆರ್ಕಿಟೆಕ್ಚರ್ ವಿಭಾಗದಲ್ಲಿ 1,003 ವಿದ್ಯಾರ್ಥಿಗಳಿಗೆ ಪದವಿ ಹಾಗೂ ವಿವಿಧ ವಿಭಾಗಗಲ್ಲಿ ಪ್ರಥಮ ರ‌್ಯಾಂಕ್ ಪಡೆದು, ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಗುವುದು ಎಂದು ಕುಲಪತಿ ಡಾ.ಎಸ್.ವಿದ್ಯಾಶಂಕರ ತಿಳಿಸಿದ್ದಾರೆ.