ಇಂದು, ನಾಳೆ ದೇಸಿ ಜಗಲಿ ಕಥಾ ಕಮ್ಮಟ 
ಜಿಲ್ಲೆ

ಇಂದು, ನಾಳೆ ದೇಸಿ ಜಗಲಿ ಕಥಾ ಕಮ್ಮಟ

Kopala - Desk - Eraveni

ಸಿಂಧನೂರು: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆ.19 ಮತ್ತು 20 ರಂದು ವೀರಲೋಕ ಪ್ರಕಾಶನ, ಕನ್ನಡ ಅಧ್ಯಯನ ವಿಭಾಗ ಸಹಯೋಗದಲ್ಲಿ ದೇಸಿ ಜಗಲಿ ಕಥಾ ಕಮ್ಮಟ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಖಾದರಬಾಷಾ ತಿಳಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ.ವೀರಭದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಪ್ರಾಚಾರ್ಯ ಚನ್ನಬಸಪ್ಪ ಚಿಲ್ಕರಾಗಿ ವಹಿಸುವರು.

ಕಥೆಗಾರ ನರಸಿಂಹಪ್ಪ ರಾಮತ್ನಾಳ, ವೀರನಗೌಡ ಗುಮಗೇರಾ, ವೀರಲೋಕ ಪ್ರಕಾಶನ ಜಿಲ್ಲಾ ಸಂಚಾಲಕ ಯರಿಯಪ್ಪ ಬೆಳಗುರ್ಕಿ ಪಾಲ್ಗೊಳ್ಳುವರು. ಕನ್ನಡ ಕಥಾ ಪರಂಪರೆಯ ಅವಲೋಕನವನ್ನು ಕವಿ ಸುಮಿತ್ ಮೇತ್ರಿ,

ಕಥಾ ಅಭಿವ್ಯಕ್ತಿ ಕ್ರಮದ ಸವಾಲು ಮತ್ತು ಸಾಧ್ಯತೆ ಕುರಿತು ಶರಣಬಸವ ಕೆ.ಗುಡದಿನ್ನಿ ಉಪನ್ಯಾಸ ನೀಡಲಿದ್ದಾರೆ. ಆ.20 ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ,

ಗ್ರಾಮ್ಯ ಜಗತ್ತು: ಕಥೆ ಹುಟ್ಟುವ ಪರಿಗಳು ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧಕ ನಾಗರಾಜ ಕೋರಿ ವಿಶೇಷ ಉಪನ್ಯಾಸ ನೀಡುವರು. ಮಹಿಳಾ ಕಥಾ ಸಾಹಿತ್ಯ, ಸಮಸ್ಯೆ ಮತ್ತು ಸವಾಲು ಕುರಿತು ಕತೆಗಾರ್ತಿ ರೇಣುಕಾ ಕೋಡಗುಂಟಿ ಮಾತನಾಡಲಿದ್ದಾರೆ.

ಕತೆಗಾರ ಅಮರೇಶ ನುಗಡೋಣಿ ಕಾರ್ಯಕ್ರಮದ ಅಧ್ಯತೆ ವಹಿಸುವರು. ಕನ್ನಡ ಅಧ್ಯಾಪಕರಾದ ಡಾ.ಹಣಮಂತ ಚಂದಲಾಪುರ, ಡಾ.ಬಸವರಾಜ ನಾಯಕ, ಡಾ.ಶರೀಫ್ ಹಸಮಕಲ್, ಹನುಮಂತ ಹಾಲಗೇರಿ, ಡಾ.ಬಸವರಾಜ ಬಳಿಗಾರ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.