ಜಿಲ್ಲೆ

ಇಂದು ಸ್ಟಾರ್ಟಪ್, ಹೂಡಿಕೆದಾರರ ಮುಖಾಮುಖಿ

ಅವಿನಾಶ್ ಜೈನಹಳ್ಳಿ

ಮೈಸೂರು: ಬಿಯಾಂಡ್ ಬ್ರೈನ್ ಸಂಸ್ಥೆ ವತಿಯಿಂದ ಸೆ.30 ರಂದು ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಸ್ಟಾರ್ಟಪ್ ಹಾಗೂ ಹೂಡಿಕೆದಾರರ ಮುಖಾಮುಖಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಿಇಒ ಸಾಗರ್ ಮಲ್ಲು ತಿಳಿಸಿದರು.


ಬೆಳಗ್ಗೆ 9.30ರಿಂದ ಸಂಜೆ 6.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಹೂಡಿಕೆದಾರರು ಹಾಗೂ 20 ರಿಂದ 22 ಜನ ಸ್ಟಾರ್ಟಪ್‌ಗಳವರು ಆಗಮಿಸುತ್ತಿದ್ದಾರೆ. ಇರುವ ಸ್ಟಾರ್ಟಪ್‌ಗಳಿಗೆ ಹೂಡಿಕೆ ದೊರಕಿಸಿಕೊಡುವ ಯತ್ನ ಇದಾಗಿದೆ. ಜತೆಗೆ, ಸ್ಟಾರ್ಟಪ್‌ಗಳಿಗೆ ಅಗತ್ಯವಾದ ಮಾಹಿತಿಯನ್ನು ತಜ್ಞರು ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಯೋಜಕರಾದ ನಿತಿನ್, ರಾಹುಲ್ ಇದ್ದರು.