ಜಿಲ್ಲೆ

ಇಂದು ಕತಿ ಬಿಡುಗಡೆ ಸಮಾರಂಭ

ಎಂ.ಎಸ್​.ಹಿರೇಮಠ ಬೆಳಗಾವಿ

ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್​ ಮತ್ತು ಚುಟುಕು ಸಾಹಿತ್ಯ ಪರಿಷತ್​ ಮೂಡಲಗಿ ತಾಲೂಕು ಟಕ ಹಾಗೂ ಸ್ನೇಹ ಸಂಕುಲ ಮೂಡಲಗಿ ಸಹಯೋಗದಲ್ಲಿ ಡಾ.ಮಹಾದೇವ ಜಿ.ಜಿಡ್ಡಿಮನಿ ಅವರ "ಗುರುಶಿಷ್ಯರ ಆತ್ಮಸಖ್ಯ ಮತ್ತು ಮಿತ್ರಸಂಮಿತ' ಎರಡು ಕತಿಗಳ ಬಿಡುಗಡೆ ಸಮಾರಂಭ ಮೇ 16ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಕುರುಹಿನಶೆಟ್ಟಿ ಅರ್ಬನ್​ ಸೊಸೆಟಿ ಸಭಾಭವನದಲ್ಲಿ ಜರುಗಲಿದೆ. ಸಮಾರಂಭದ ಅಧ್ಯತೆಯನ್ನು ಕುರುಹಿನಶೆಟ್ಟಿ ಸೊಸೆಟಿ ಅಧ್ಯ ಸುಭಾಷ ಬೆಳಕೂಡ ವಹಿಸುವರು. ಶಾಸಕ ಬಾಲಚಂದ್ರ ಜಾರಕಿಹೊಳಿ ಸಮಾರಂಭ ಉದ್ಘಾಟಿಸುವರು. ಅತಿಥಿಗಳಾಗಿ ಪ್ರೊ. ಚಂದ್ರಶೇಖರ ಅಕ್ಕಿ, ಡಾ.ಸಂಜಯ ಶಿಂಧಿಹಟ್ಟಿ, ವೀರಯ್ಯ ಮಠಪತಿ, ಚಿದಾನಂದ ಹೂಗಾರ ಸೇರಿ ಅನೇಕ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.