ಜಿಲ್ಲೆ

ಇಂದು ಕಾಳಿಕಾದೇವಿ ಕಾರ್ತಿಕೋತ್ಸವ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ಪಟ್ಟಣದ ಲಕ್ಷ್ಮೀ ನಗರದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ಆಶ್ರಯದಲ್ಲಿ ಡಿ.22ರಂದು ಕಾಳಿಕಾದೇವಿ ಕಾರ್ತಿಕೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ.

ಬೆಳಗ್ಗೆ 8.30ಕ್ಕೆ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶ್ವಕರ್ಮ ಧ್ವಜಾರೋಹಣ, ಸಂಜೆ ಪಲ್ಲಕ್ಕಿ ಉತ್ಸವ, ಭೂ ದಾನಿಗಳಿಗೆ ಸತ್ಕಾರ ಸಮಾರಂಭ ಜರುಗುವುದು. ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಕಾಳಿಕಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಶ್ರೀಕಾಂತ ಪತ್ತಾರ, ಕಾರ್ಯದರ್ಶಿ ಈರಪ್ಪ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.