ಮಧುರಖಂಡಿ ಶ್ರೀ ಸಿದ್ಧಗಿರಿ ಮಹಾಸ್ವಾಮಿಗಳು 
ಜಿಲ್ಲೆ

ಇಂದು ಸಿದ್ಧಗಿರಿ ಸ್ವಾಮಿಗಳ ಜಯಂತಿ

ಮುಧೋಳ: ತಾಲೂಕಿನ ಶಿರೋಳದ ಬಸವ ಬೃಂದಾವನದಲ್ಲಿ ಡಿ.31ರಂದು ಬೆಳಗ್ಗೆ 9ಕ್ಕೆ ಮಧುರಖಂಡಿಯ ಸಿದ್ದಗಿರಿ ಮಹಾಸ್ವಾಮಿಗಳ ಜಯಂತ್ಯುತ್ಸವ ನಡೆಯಲಿದೆ.
ಶಿರೋಳದ ಶಂಕರಾರೂಢ ಶ್ರೀ, ಸೋಮಲಿಂಗಯ್ಯ ಗಣಾಚಾರಿ, ಯಮುನಾನಂದ ಮಹಾರಾಜರು, ಪ್ರಣವಾನಂದ ಶ್ರೀ, ರಾಮಯ್ಯ ಶ್ರೀ, ಬಸಯ್ಯ ಸ್ತ್ರೀ, ವೆಂಕಣ್ಣ ಪಡತಾರೆ, ಮಹದೇವಪ್ಪ ಹುಲ್ಯಾಳ ಭಾಗವಹಿಸುವರು. ಸಿದ್ಧಗಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಶಿರೋಳ ರಾಮಾರೂಢ ಮಠದ ಶ್ರೀ ಶಂಕರಾರೂಢ ಸ್ವಾಮಿಗಳು, ಮುಚಳಂಬಾದ, ನಾಗಭೂಷಣ ಶಿವಯೋಗಿಗಳ ಮಠ ಶ್ರೀ ಪ್ರಣವಾನಂದ ಸ್ವಾಮಿಗಳು, ಕೃಷಿ ಕಾಯಕ ಯೋಗಿ, ಶ್ರೀ ಸೋಮಲಿಂಗಯ್ಯ ಸ್ವಾಮಿಗಳು, ಗುರುಪಾದೇಶ್ವರ ಮಠ ಶ್ರೀಮಯ್ಯ ಸ್ವಾಮಿಗಳು, ಶಿರೋಳದ ಯಮುನಾಂದ ಮಹಾಸ್ವಾಮಿಗಳು, ವೆಂಕಣ್ಣ ಪಡತಾರೆ, ಭಜನಾ ಕಲಾವಿದ ಮಹಾದೇವಪ್ಪ ಹುಲ್ಯಾಳ, ಮಧುರಖಂಡಿಯ ಶ್ರೀ ಬಸಯ್ಯ ಸ್ವಾಮಿಗಳು ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ.
2023-24ನೇ ಸಾಲಿನ ಸಿದ್ಧಗಿರಿ ಜ್ಯೋತಿ ಪ್ರಶಸ್ತಿಯನ್ನು ಕಿರುಚಿತ್ರ ನಿರ್ದೇಶಕ, ನಾಯಕ ನಟರಾದ ನಿಂಗರಾಜ ಸಿಂಗಾಡಿ, ಬಸವರಾಜ ಸನದಿ ಹಾಗೂ ಸಿದ್ಧಗಿರಿ ಸದ್ಭಾವನ ಪ್ರಶಸ್ತಿಯನ್ನು ಸಿದ್ದಾಪೂರ ಭಜನಾ ಕಲಾವಿದ ಬಸವರಾಜ ಅಂಬಿ ಅವರಿಗೆ ಪ್ರಧಾನ ಮಾಡಲಾಗುವುದೆಂದು ಮಹಾಂತಯ್ಯ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.