ಜಿಲ್ಲೆ

ಇಂದು ಮಹಾಲಿಂಗಪುರದಲ್ಲಿ ಹಲಗೆ ಹಬ್ಬ

ಮಹಾಲಿಂಗಪುರ: ಹೋಳಿ ಹಬ್ಬದ ಆಚರಣೆ ಅಂಗವಾಗಿ ನಗರದ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಮಾ.12ರಂದು ಹಲಗೆ ಹಬ್ಬ ಮತ್ತು 14ರಂದು ನಡುಚೌಕಿಯಲ್ಲಿ ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರಾದ ಶಿವಾನಂದ ಅಂಗಡಿ ಹಾಗೂ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಪಟ್ಟಣದ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಗೆ ಹಬ್ಬವನ್ನು ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಹಲಗೆ ಬಾರಿಸುವುದರೊಂದಿಗೆ ಚಾಲನೆ ನೀಡುವರು ಎಂದರು.

ಪುರಸಭೆ ಸದಸ್ಯ ಚನ್ನಬಸು ಯರಗಟ್ಟಿ, ಮುಖಂಡರಾದ ಭೀಮಶಿ ಗೌಂಡಿ, ವಿಷ್ಣುಗೌಡ ಪಾಟೀಲ, ಮುತ್ತಪ್ಪ ದಲಾಲ, ಚನ್ನಪ್ಪ ಪಟ್ಟಣಶೆಟ್ಟಿ, ರಮೇಶ ಕೇಸರಗೊಪ್ಪ, ಶಿವನಗೌಡ ಪಾಟೀಲ, ಮಹೇಶ ಜಿಡ್ಡಿಮನಿ, ಚೇತನ ಬಂಡಿವಡ್ಡರ, ಕುಮಾರ ನಾರಾಯಣಕರ, ಉದಯ ಪವಾರ, ಕುಮಾರ ಪೂಜಾರಿ ಮತ್ತಿತರರಿದ್ದರು.