ಜಿಲ್ಲೆ

ಇಂದಿನಿಂದ ಸಿದ್ಧೇಶ್ವರ ಶ್ರೀಗಳ ಗುರುನಮನ ಮಹೋತ್ಸವ

ವಿಜಯಪುರ: ಶತಮಾನದ ಸಂತ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳ ಗುರುನಮನ ಮಹೋತ್ಸವ ಡಿ. 25 ರಿಂದ ಜ. 2 ರವರೆಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆಯಲಿದೆ.

ಈ ಜ್ಞಾನಯಜ್ಞಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಎಂದರೆ ಅದೊಂದು ಾನದ ಯವಿದ್ದಂತೆ. ಒಂಬತ್ತು ದಿನ ನಡೆಯಲಿರುವ ಈ ಮಹೋನ್ನತ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಜ್ಞಾನಾಮೃತವನ್ನು ಸ್ವೀಕರಿಸಬೇಕು. ಸಿದ್ಧೇಶ್ವರ ಶ್ರೀಗಳ ಪ್ರವಚನಗಳ ಸಾರವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಹರ್ಷಾನಂದ ಮಹಾಸ್ವಾಮೀಜಿ ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಅಂಗವಾಗಿ 9 ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹಲವು ವಿಷಯಗಳ ಕುರಿತು ಚಿಂತನ&ಮಂಥನ ನಡೆಯಲಿದೆ ಎಂದರು.

ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಕಾನಿಪ ಸಂದ ಜಿಲ್ಲಾಧ್ಯ ಸಂಗಮೇಶ ಚೂರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಜ್ಞಾನ ಹಂಚಿದ ಗುರುವಿಗೆ ದೀಪ ನಮನ: ಜ್ಞಾನ, ಅಧ್ಯಾತ್ಮದ ದಿವ್ಯ ಬೆಳಕು ತೋರಿದ ಲಿಂ. ಸಿದ್ಧೇಶ್ವರ ಶ್ರೀಗಳಿಗೆ ದೀಪ ನಮನ ಸಲ್ಲಿಸುವ ವಿಶೇಷ ಕಾರ್ಯಕ್ರಮ ಜ. 1 ರಂದು ನಡೆಯಲಿದ್ದು, ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯ ಸಾಹಿತಿ ಗೊ.ರು. ಚನ್ನಬಸಪ್ಪ ಉಪನ್ಯಾಸ ನೀಡಲಿದ್ದಾರೆ. ಅಂದು ಆಶ್ರಮದಲ್ಲಿ ಲಾಂತರ ದೀಪಗಳನ್ನು ಬೆಳಗಿಸಿ ದೀಪ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.

ಜ. 2 ರಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಪುಷ್ಪ ನಮನ ಸಲ್ಲಿಸಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಸಂತ&ಮಹಾತ್ಮರು, ಮಠಾಧೀಶರು, ಗಣ್ಯರು ಭಾಗವಹಿಸುವರು.

ಜ್ಞಾನಯೋಗಾಶ್ರಮದಲ್ಲಿ ಜ್ಞಾನಯಜ್ಞ : ನಗರದ ಜ್ಞಾನಯೋಗಾಶ್ರಮದಲ್ಲಿ ಡಿ. 25 ರಂದು ವಿವಿಧ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಡಿ. 25 ರಂದು ಸುಧಾರಿತ ಕೃಷಿ ಕುರಿತಾದ ಗೋಷ್ಠಿ ನಡೆಯಲಿದ್ದು, ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್​. ಪಾಟೀಲ ಹಾಗೂ ಎ.ಎಸ್​. ಆನಂದ ವಿಶೇಷ ಉಪನ್ಯಾಸ ನೀಡುವರು. ಡಿ. 26 ರಂದು ಜ್ಞಾನಾರಾಧನೆ ಎಂಬ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಹೇಶ ಮಾಶ್ಯಾಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಡಿ. 27 ರಂದು "ಗ್ರಾಮ ಸಂಸತಿ' ಎಂಬ ವಿಚಾರ ಗೋಷ್ಠಿ ನಡೆಯಲಿದ್ದು, ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ಗ್ರಾಮೀಣ ಬದುಕಿನ ಸೊಗಡು, ಆಚಾರ&ವಿಚಾರಗಳ ಭವ್ಯ ಸಂಸತಿಯನ್ನು ಪ್ರತಿಬಿಂಬಿಸುವ ಕಾರ್ಯ ಮಾಡಲಿದ್ದಾರೆ. ಡಿ. 28 ರಂದು "ಯೋಗ ಜೀವನ' ಎಂಬ ವಿಷಯದ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಜೀವನ ಆಧಾರಿತ ಉಪನ್ಯಾಸವನ್ನು ಉಪ ಕುಲಪತಿ ಎಸ್​. ವ್ಯಾಸ, ಡಾ. ಎಚ್​.ಆರ್​. ನಾಗೇಂದ್ರಜಿ ಹಾಗೂ ಡಾ. ಪ್ರಶಾಂತ ಕಡಕೋಳ ನೀಡುವರು. ಡಿ. 29 ರಂದು "ಮಾತೃಭಕ್ತಿ' ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ಡಾ. ವಿಜಯಲಕ್ಷಿ$್ಮ ಬಾಳೆಕುಂದ್ರಿ ನೇತೃತ್ವದಲ್ಲಿ ನಡೆಯಲಿದೆ. ಡಿ. 30 ರಂದು "ಜಾಗತಿಕ ತತ್ವ ಚಿಂತನೆಗಳು' ವಿಷಯದ ವಿಶೇಷ ಉಪನ್ಯಾಸದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ದೀತ್​ ಕಾರ್ಯಕ್ರಮದ ನೇತೃತ್ವ ವಹಿಸುವರು. ಡಿ. 31 ರಂದು "ಸೇವಾ ಭಾವ' ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಸ್ಕಾಂ ಅಧಿಕಾರಿ ಮಹಾಂತೇಶ ಬೀಳಗಿ ಉಪನ್ಯಾಸ ನೀಡುವರು.