ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಪಂಚಮುಖಿ ಗಣಪತಿ ದೇವಾಲಯ. 
ಜಿಲ್ಲೆ

ಮಹಾಗಣಪತಿ ದೇವಾಲಯದಲ್ಲಿ ಮಹಾಕುಂಭಾಭಿಷೇಕ ಇಂದು

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮಾ.22ರಂದು ಪಂಚಮುಖಿ ಮಹಾಗಣಪತಿ ಮತ್ತು ನವಗ್ರಹ ದೇವಾಲಯದಲ್ಲಿ ಮಹಾಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಪಂಚರಾತ್ರಾಗಮ ಪ್ರವೀಣ ರಾಘವನ್ ಜಯರಾಂ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಆರಂಭವಾಗಿದೆ. 22ರಂದು ಮಹಾಕುಂಭಾಭಿಷೇಕ, ಫಲಪಂಚಾಮೃತ, ಮಹಾರುದ್ರಾಭಿಷೇಕ, ಅಲಂಕಾರ, ಗೋ ದರ್ಪಣ, ಪೂರ್ಣಕುಂಭ ಮುಂತಾದ ಧಾರ್ಮಿಕ ಕಾರ್ಯ ನಡೆಯಲಿವೆ.

23ರಂದು ಬೆಳಗ್ಗೆ 11 ಗಂಟೆಯಿಂದಲೇ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು. ಆದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.