RAICHUR 
ಜಿಲ್ಲೆ

ಇಂದು ಸಿಜಿಕೆ ಬೀದಿರಂಗ ದಿನ, ಪುರಸ್ಕಾರ

 ರಾಯಚೂರು ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಹಾಗೂ ಕರ್ನಾಟಕ ಬೀದಿನಾಟಕ ಅಕಾಡೆಮಿ ವತಿಯಿಂದ ಜೂ.27 ರಂದು ನಗರದ ಶ್ರೀ ಶಿವಶರಣ ಮಾದಯ ಚೆನ್ನಯ್ಯ ಗುರುಪೀಠದಲ್ಲಿ ಸಂಜೆ 6:30 ಕ್ಕೆ ಸಿಜಿಕೆ ಬೀದಿರಂಗ ದಿನ ಮತ್ತು ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ಕಲಾ ಬಳಗದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮ ಉದ್ಘಾಟನೆಯನ್ನು ಹಿರಿಯ ಸಾಹಿತಿ ವೀರಹನುಮಾನ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಶಾಂತಾ ಕುಲಕರ್ಣಿ , ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಮರಡ್ಡಿ , ಪತ್ರಕರ್ತ ವೆಂಕಟೇಶ್ ಹೂಗಾರ್ ವಹಿಸಲಿದ್ದು,

ನಾಗರಾಜ್ ಸಿರವಾರ , ಅಂಬರೇಶ ಅವರ ತಂಡದಿಂದ ರಂಗಗೀತೆಗಳ ಕಾರ್ಯಕ್ರಮ ಹಾಗೂ ವೆಂಕಟನರಸಿಂಹಲು ತಂಡದವರಿಂದ ಜಾನಪದ ಗಾಯನ, ಶಾಂತಮೂರ್ತಿ ಗಬ್ಬೂರು ರವರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಾಹಿತಿ ವಿ.ಎನ್.ಅಕ್ಕಿ , ವೆಂಕಟನರಸಿಂಹಲು, ರಮೇಶ ,ರಂಗಪ್ಪ ಇದ್ದರು.