ಡಾ. ಎಸ್​.ಪಿ. ಬಾಲಸುಬ್ರಮಣ್ಯಂ 
ಜಿಲ್ಲೆ

ಜೂ. 9 ರಂದು ಎಸ್​ಪಿಬಿ ನೆನೆಪಿನಂಗಳದಲ್ಲಿ

ವಿಜಯಪುರ : ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜೂ. 9 ರಂದು ಬೆಳಗ್ಗೆ 11 ರಿಂದ ರಾತ್ರಿ 8 ರವರೆಗೆ ಡಾ. ಎಸ್​.ಪಿ. ಬಾಲಸುಬ್ರಮಣ್ಯಂ ಅವರ 78ನೇ ಜನ್ಮದಿನದ ಸಂಭ್ರಮದ ಹಿನ್ನೆಲೆ "ಬಾಲೂ ಸರ್​ ನೆನಪಿನಂಗಳದಲ್ಲಿ' ಎಂಬ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ಥಳಿಯ ಸಂಗೀತ ಶಿಣ ಸಂಸ್ಥೆ, ಸನ್​ಲೈಟ್​ ಮೆಲೋಡೀಸ್​, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಜಿಲ್ಲಾ ಯುವ ಪರಿಷತ್​ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಹೆಸರಾಂತ ಗಾಯಕ& ಗಾಯಕಿಯರು ಈ ಮಹಾನ್​ ಗಾಯಕ ಹಾಡಿರುವ ಗೀತೆಗಳನ್ನು ಹಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಜಿಲ್ಲೆಯ ಸಂಗೀತಾಸಕ್ತರು ಭಾಗವಹಿಸುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ. 8951790555 ಕ್ಕೆ ಸಂಪರ್ಕಿಸುವಂತೆ ಆಯೋಜಕರಾದ ಪ್ರಕಾಶ ಮಠ ಮತ್ತು ಜಿಲ್ಲಾ ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.