ಜಿಲ್ಲೆ

ಫರ್ನಿಚರ್​ ಮೇಳಕ್ಕೆ ಇಂದು ಕೂಡ ಭರ್ಜರಿ ಸ್ಪಂದನೆ; ಅತ್ಯಾಧುನಿಕ ಉಪಕರಣಗಳ ಖರೀದಿಗೆ ಮುಗಿಬಿದ್ದ ಜನರು..

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗ ಮತ್ತು ಯುನಿಲೆಟ್​ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ ನಾಲ್ಕು ದಿನಗಳ 'ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಉಪಕರಣಗಳ ಮೇಳ'ಕ್ಕೆ ಇಂದೂ ಉತ್ತಮ ಜನಸ್ಪಂದನೆ ಸಿಕ್ಕಿದೆ. ಇವತ್ತು ವಾರಾಂತ್ಯದ ದಿನವಾದ್ದರಿಂದ ಎಕ್ಸ್​ಪೊಗೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಖರೀದಿಯ ಭರಾಟೆ ಜೋರಾಗಿಯೇ ನಡೆಯುತ್ತಿದೆ.

ಅರಮನೆ ಮೈದಾನದ ಗಾಯತ್ರಿ ವಿಹಾರ್​​ನಲ್ಲಿ ಈ ಮೇಳ ನಡೆಯುತ್ತಿದ್ದು, ವಿವಿಧ ಬ್ರ್ಯಾಂಡ್​ಗಳ ಅತ್ಯಾಧುನಿಕ ಉಪಕರಣಗಳ ಪ್ರದರ್ಶನದ ಜತೆಗೆ ಪ್ರಾತ್ಯಕ್ಷಿಕೆ ಕೂಡ ನಡೆಯುತ್ತಿದೆ. ಈ ವಿಶೇಷವಾದ ಮೇಳ ನಾಳೆಯೇ ಮುಗಿಯಲಿರುವುದರಿಂದ ಇಂದು ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದಾರೆ.

ಉತ್ತಮ ಗುಣಮಟ್ಟದ, ನವನವೀನ ಹಾಗೂ ವೈವಿಧ್ಯಮಯ ಪೀಠೋಪಕರಣಗಳು, ಎಲೆಕ್ಟ್ರಾನಿಕ್​ ಸಾಧನಗಳು, ಅಲಂಕಾರಿಕ ವಸ್ತುಗಳು ಭಾರಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಖರೀದಿದಾರರಿಗೆ ವಿಶೇಷ ಕೊಡುಗೆಗಳೂ ಸಿಗುತ್ತಿವೆ.