ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಿಶ್ವ ತಂಬಾಕು ರಹಿತ ದಿನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶ್ರೀಕಾಂತ ಪೂಜಾರ, ಅಶೋಕ ಸುರಪುರ, ಡಿ.ಎಂ. ಮದರಿ, ಪ್ರಕಾಶ ಚವಾಣ ಮತ್ತಿತರರಿದ್ದಾರೆ. 
ಜಿಲ್ಲೆ

ತಂಬಾಕು ಸೇವನೆಯಿಂದ ದೇಹ ನಾಶ

ಗಿರೀಶ ಸಗರ

ವಿಜಯಪುರ: ತಂಬಾಕು ಸೇವನೆ ಮನುಷ್ಯನ ಜೀವನಾಯುಷ್ಯ ಕಡಿಮೆ ಮಾಡುತ್ತಿದ್ದು, ಯುವಜನತೆ ತಂಬಾಕು ಚಟದ ದಾಸರಾಗುತ್ತಿರುವುದು ದುರದೃಷಕರ ಸಂಗತಿ ಎಂದು ಸಮಾಜ ಕಾರ್ಯಕರ್ತ ಶ್ರೀಕಾಂತ ಪೂಜಾರ ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್​ಎಸ್​ಎಸ್​ ಕೋಶ, ಯುವ ರೆಡ್​ ಕ್ರಾಸ್​ ಟಕ ಮತ್ತು ಸಮಾಜ ಕಾರ್ಯ ವಿಭಾಗದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂಬಾಕು ಉತ್ಪನ್ನಗಳನ್ನು ತಯಾರಿಸಲು ವಿಷಕಾರಿ ರಾಸಾಯನಿಕ ಬಳಸಲಾಗುತ್ತದೆ. ಅದರ ಸೇವನೆಯಿಂದ ಮನುಷ್ಯನಲ್ಲಿ ಬಾಯಿ ಕ್ಯಾನ್ಸರ್​, ಗಂಟಲು ಕ್ಯಾನ್ಸರ್​, ಶ್ವಾಸಕೋಶದ ತೊಂದರೆಗಳು, ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ ಎಂದರು.

ಮಹಿಳಾ ವಿವಿ ಎನ್​ಎಸ್​ಎಸ್​ ಸಂಯೋಜಕ ಅಶೋಕ ಸುರಪುರ ಮಾತನಾಡಿ, ತಂಬಾಕು ಸೇವನೆಯಿಂದ ವ್ಯಕ್ತಿ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ತಿಳಿಸಿದರು.

ಮಹಿಳಾ ವಿವಿ ಅರ್ಥಶಾಸ ವಿಭಾಗದ ಮುಖ್ಯಸ್ಥ ಡಿ.ಎಂ. ಮದರಿ ಮತ್ತು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಕೋಶದ ಜಿಲ್ಲಾ ಸಲಹೆಗಾರ ಡಾ. ಪ್ರಕಾಶ ಚವಾಣ ಮಾತನಾಡಿದರು. ತಂಬಾಕು ಮುಕ್ತ ಸಮಾಜಕ್ಕಾಗಿ ಪ್ರಮಾಣ ವಚನ ಬೋಧಿಸಲಾಯಿತು.

ಶೃತಿ ಭಜಂತ್ರಿ ಪ್ರಾರ್ಥಿಸಿದರು. ಕಲಾವತಿ ಕಾಂಬಳೆ ಸ್ವಾಗತಿಸಿದರು. ವಿದ್ಯಾಶ್ರೀ ಬೆಳ್ಳುಂಡಗಿ ನಿರೂಪಿಸಿದರು. ಡಾ. ಗುಲಾಬ ರಾಠೋಡ ವಂದಿಸಿದರು.