ಜಿಲ್ಲೆ

ತಂಬಾಕು ಮಾರಾಟ ಅಂಗಡಿಗಳಿಗೆ ಮೇಲೆ ದಾಳಿ

ಚಿತ್ರದುರ್ಗ: ಜಿಲ್ಲಾ ಮಟ್ಟದ ತಂಬಾಕು ಉತ್ಪನ್ನ ತನಿಖಾ ತಂಡ ಬುಧವಾರ, ಚಳ್ಳಕೆರೆ ತಾಲೂಕಿನ ವಿವಿಧೆಡೆ ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಿಧಿಸಿದೆ.

ಒಟ್ಟು 28 ಪ್ರಕರಣಗಳನ್ನು ದಾಖಲಿಸಿ 3100 ರೂ. ದಂಡ ಹಾಕಿದೆ. ಸೆಕ್ಷನ್- 4, 6ಎ ಮತ್ತು 6ಬಿ ಅಡಿ ಧೋಮಪಾನ ನಿಷೇಧ ಬೋರ್ಡ್ ಹಾಕಲು ಅಂಗಡಿಯವರಿಗೆ ಸೂಚಿಸಲಾಯಿತು.

ತಂಬಾಕು ಮತ್ತು ಕರೊನಾ ಕುರಿತು ಸಾರ್ವಜನಿಕರಲ್ಲಿ, ಅಂಗಡಿ ಮಾಲೀಕರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಪಾನ್ ಮಸಾಲ, ತಂಬಾಕು ಉತ್ಪನ್ನಗಳ ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಸಹ ಮೂಡಿಸಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಕೆ.ಎಂ.ತಿಪ್ಪೇಸ್ವಾಮಿ, ಪಿಎಸ್‌ಐ ಸತೀಶ್ ನಾಯ್ಕ, ಪೇದೆ ಪ್ರಭುರಾಜ್ ರೆಡ್ಡಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಣೇಶ್ ಇದ್ದರು.