ಜಿಲ್ಲೆ

ತಂಬಾಕು ಆರೋಗ್ಯಕ್ಕೆ ಮಾರಕ

ಬೆಳಗಾವಿ: ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಸೇವನೆಯಿಂದ ದೂರವಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ.ಗಡಾದ ಹೇಳಿದರು.

ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಯ ರೋಗ ನಿಮೂರ್ಲನ ಕಾರ್ಯಕ್ರಮ, ರಾಜ್ಯ ತಂಬಾಕು ನಿಯಂತ್ರಣ ಟಕಗಳ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು

ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜಿಲ್ಲಾ ಸರ್ವೇಣಾ ಹಾಗೂ ತಂಬಾಕು ನಿಯಂತ್ರಾಧಿಕಾರಿ ಡಾ.ಎಸ್​.ಎಸ್​.ದೂಡ್ಡಮನಿ ಮಾತನಾಡಿದರು.

ಜಿಲ್ಲಾ ಯ ರೋಗ ನಿಮೂರ್ಲನಾಧಿಕಾರಿ ಡಾ.ಚಾಂದನಿ, ಡಾ.ಉಪೇಂದ್ರ, ರಾಜ್ಯ ಕಾರ್ಯಕ್ರಮ ಸಂಯೋಜಕರಾದ ರಾಜೇಶ, ಮಹಾಂತೇಶ ಉಳ್ಳಾಗಡ್ಡಿ, ಕೆಎಲ್​ಇ ವಿಕೆಐಡಿಎಸ್​ ದಂತ ವೈದ್ಯಕಿಯ ಮಹಾವಿದ್ಯಾಲಯದ ದಂತ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ರೋಪಾಲಿ ಸಂಕೇಶ್ವರಿ, ಡಾ.ಶ್ವೇತಾ ಪಾಟೀಲ, ಶಿವಾಜಿ ಮಾಳ್ಗನವರ, ಕವಿತಾ ರಾಜಣ್ಣವರ, ಆಶಾ ಹಿರೇಮಠ, ರಮೇಶ ಹೂಲಿಕೇರಿ ಇತರರಿದ್ದರು.