ಜಿಲ್ಲೆ

ತಂಬಾಕು ವ್ಯಸನದಿಂದಾಗುವ ದುಷ್ಟರಿಣಾಮ: ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

ಗದಗ: ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ. ವೆಂಕಟೇಶ ರಾಠೋಡ್ ಮಾರ್ಗದರ್ಶನದಲ್ಲಿ ನಗರದ ಸಿ.ಡಿ.ಓ ಜೈನ್ ಆಂಗ್ಲ್ ಮಾಧ್ಯಮ ಪ್ರೌಢಶಾಲೆಯಲಿ ್ಲತಂಬಾಕು ವ್ಯಸನದಿಂದಾಗುವ ದುಷ್ಟರಿಣಾಮ ಹಾಗೂ ಕೋಟ್ಪಾ ಕಾಯ್ದೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ  ಗೋಪಾಲ ಸುರುಪುರ    ಶಾಲೆಯ ಮುಖ್ಯೋಪಾಧ್ಯಯರಾದಂತ ಶ್ರೀಮತಿ ಮಾಧುರಿ ಹಿರೇಮಠ, ಶ್ರೀಮತಿ ಬಸಮ್ಮ ಚಿತ್ತರಗಿ,  ಸಿ.ಡಿ.ಓ ಜೈನ್‍ಆಂಗ್ಲ್ ಮಾಧ್ಯಮ, ಶಿಕ್ಷಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಂಬಾಕು ಸೇವನೆಯಿಂದ ಅದರಲ್ಲಿ ಇರುವ ನಿಕೋಟಿನ್ ಎಂಬ ರಾಸಾಯನಿಕ ವಸ್ತು ಮಾನವನ ದೇಹದಲ್ಲಿನ ನರಮಂಡಲವನ್ನು ದುರ್ಬಲ ಹಾಗೂ ಸಂಕುಚಿತಗೊಳಿಸಿ ದೇಹದ ಎಲ್ಲಾ ಅಂಗಗಳಿಗೆ ರಕ್ತ ಪೊರೈಕೆ  ಮಾಡಲು ಅಡಚಣೆ ಉಂಟಾಗಿ ಅಂಗಗಳು ದುರ್ಬಲಗೊಂಡು ಹಾಳಾಗುತ್ತವೆ. ಇದರಿಂದ ಹೃದಯ ಸಂಬಂಧಿ ಖಾಯಿಲೆ, ಪ್ವಾರ್ಶವಾಯು, ಕ್ಯಾನ್ಸರ್, ಚರ್ಮ ಸುಕ್ಕುವುದು, ಕಣ್ಣಿನ ಪೊರೆ, ಗ್ಯಾಂಗ್ರೀನ್ ಇಂತಹ ಗಂಭೀರ ಖಾಯಿಲೆಗಳಿಗೆ ಬಲಿಯಾಗುತ್ತಿದ್ದು, ಪುರುಷರಲ್ಲಿ ನಪಂಪುಸುಕತೆ, ಮಹಿಳೆಯರಲ್ಲಿ ನಿರ್ಜೀವ ಜನನ, ಅಕಾಲಿಕ ಜನನ, ಕಡಿಮೆ ತೂಕದ ಮಗು ಜನನ ಉಂಟಾಗುತ್ತದೆ ಎಂಬುದರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.