ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬೆಳಗಾವಿ ಯಳ್ಳೂರು ರಸ್ತೆಯಲ್ಲಿರುವ ಕೆಎಲ್​ಇ ಶತಮಾನೋತ್ಸವ ನರ್ಸಿಂಗ್​ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳಿಂದ ಶನಿವಾರ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು. 
ಜಿಲ್ಲೆ

ಕೆಎಲ್​ಇ ವಿದ್ಯಾರ್ಥಿಗಳಿಂದು ತಂಬಾಕು ಜಾಗೃತಿ

ಬೆಳಗಾವಿ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಯಳ್ಳೂರು ರಸ್ತೆಯ ಕೆಎಲ್​ಇ ಶತಮಾನೋತ್ಸವ ನರ್ಸಿಂಗ್​ ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳಿಂದ ಶನಿವಾರ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು.

ನಗರದ ಶಿವಾಜಿ ಮಹಾರಾಜ ಉದ್ಯಾನದಿಂದ ಕೆಎಲ್​ಇಯ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆವರೆಗೂ ರ್ಯಾಲಿ ನಡೆಸಿದರು. ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರ ಪ್ರದರ್ಶಿಸಿದರು. ಅತಿಥಿಯಾಗಿ ಆಗಮಿಸಿದ್ದ ಮೇಯರ್​ ಮಂಗೇಶ ಪವಾರ ಅವರು ತಂಬಾಕಿನಿಂದ ಸಮುದಾಯಗಳ ಮೇಲೆ ಆಗುವ ಅಪಾಯ ತಿಳಿಸಿ, ತಂಬಾಕುಮುಕ್ತ ಜೀವನ ನಡೆಸುವುದಕ್ಕೆ ತಿಳಿಸಿದರು. ಪಾಲಿಕೆ ಸದಸ್ಯರಾದ ರಾಜು ಭಾತಖಂಡೆ, ಗಿರೀಶ ಧೊಂಗಡಿ ಮಾತನಾಡಿ, ಯುವಕರು ತಂಬಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಂಬಾಕಿನಿಂದಾಗುವ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳು ಬೀದಿನಾಟಕ ಪ್ರದರ್ಶಿಸಿದರು. ತಂಬಾಕು ಬಳಕೆಯಿಂದ ದೂರವಿರುವುದಾಗಿಯೂ ಪ್ರತಿೆ ಮಾಡಿದರು. ಪ್ರಾಚಾರ್ಯ ಡಾ.ವಿಕ್ರಾಂತ ನೇಸರಿ ರ್ಯಾಲಿಗೆ ಚಾಲನೆ ನೀಡಿದರು. 174 ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.