ಬೈಲಹೊಂಗಲ: ನಮ್ಮ ಭಾಗದ ಆರಾಧ್ಯ ದೆವ ಉಳವಿ ಚನ್ನಬಸವೇಶ್ವರ ಮೂರ್ತಿ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ದೊಡ್ಡ ಕೆರೆ ಉದ್ಯಾನವನದಲ್ಲಿ ನಿರ್ಮಾಣವಾಗಲಿರುವ ಉಳವಿ ಚನ್ನ ಬಸವೇಶ್ವರರ ಮೂರ್ತಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಭಕ್ತರ ಅಭಿಲಾಷೆಯಂತೆ 21 ಅಡಿ ಎತ್ತರದ ಭವ್ಯವಾದ ಉಳವಿ ಚನ್ನಬಸವೇಶ್ವರ ಮೂರ್ತಿ ನಿರ್ಮಾಣ ಕಾರ್ಯ ಜರುಗಲಿದೆ. ನುರಿತ ಶಿಲ್ಪಿಗಳಿಂದ ನಿರ್ಮಾಣವಾಗುವ ಉತ್ತಮ ಮೂರ್ತಿಯಿಂದ ಪಟ್ಟಣದ ಹಿರಿಮೆ ಹೆಚ್ಚಲಿದೆ ಎಂದರು.
ಚಿತ್ರನಟ ಶಿವರಂಜನ ಬೋಳನ್ನವರ ಮಾತನಾಡಿ, ಪುರಸಭೆ ವತಿಯಿಂದ ಅಭಿವದ್ಧಿಗೊಳಿಸಲಾದ ದೊಡ್ಡಕೆರೆಯಲ್ಲಿ ಚನ್ನಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಗೆ ಭಕ್ತರು ಸಹಕಾರ ನೀಡಬೇಕೆಂದರು.
ಸದಾಶಿವಯ್ಯ ಪತ್ರಿಮಠ ಶಾಸ್ತ್ರಿಗಳು ಪೂಜೆ ಸಲ್ಲಿಸಿದರು. ಬ್ರಹ್ಮಕುಮಾರಿ ಈಶ್ವರಿಯ ಪ್ರಭಾ ಅಕ್ಕ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಆರಾದ್ರಿಮಠ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ವಿರೂಪಾಯ್ಯ ಕೋರಿಮಠ, ರಾಜು ಜನ್ಮಟ್ಟಿ, ಡಾ.ಎ.ಎನ್. ಬಾಳಿ, ಮಹಾಂತೇಶ ತುರಮರಿ, ಪ್ರಮೋದಕುಮಾರ ವಕ್ಕುಂದಮಠ, ಬಿ.ಬಿ.ಗಣಾಚಾರಿ, ಶ್ರೀಶೆಲ ಯಡಳ್ಳಿ, ಮಡಿವಾಳಪ್ಪ ಹೋಟಿ, ಪಾಂಡಪ್ಪ ಇಂಚಲ,
ಎ್.ಎಸ್.ಸಿದ್ದನಗೌಡರ, ಕಾಶೀನಾಥ ಬಿರಾದಾರ, ಬಸವರಾಜ ಭರಮಣ್ಣವರ, ಮೋಹನ ಚಪಾಟೀಲ, ಸುಭಾಷ ತುರಮರಿ, ಶಂಕರ ಬೋಳನ್ನವರ ಇತರರಿದ್ದರು.