ಜಿಲ್ಲೆ

ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿ

ರೈತರಿಗೆ, ಅನ್ಯಾಯವಾಗದಂತೆ, ನೋಡಿಕೊಳ್ಳಲಿ,

ರಾಮದುರ್ಗ: ಧನಲಕ್ಷಿ$್ಮ ಸಕ್ಕರೆ ಕಾರ್ಖಾನೆ ಲೀಸ್​ ಪಡೆದ ಪ್ಯಾರಿ ಕಂಪನಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲ ತಳಿಯ ಕಬ್ಬು ಕಟಾವಿಗೆ ಕ್ರಮ ತೆಗೆದುಕೊಂಡು ರೆತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕಬ್ಬು ನುರಿಸುವ ಹಂಗಾಮು ಮುನ್ನಡೆಸಬೇಕು ಎಂದು ಕಾರ್ಖಾನೆ ನಿರ್ದೇಶಕ ಮಹಾದೇವಪ್ಪ ಯಾದವಾಡ ತಾಕೀತು ಮಾಡಿದರು.

ತಾಲೂಕಿನ ಖಾನಪೇಠ ಗ್ರಾಮದ ಶ್ರೀಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆಯ ಲೀಸ್​ ಪಡೆದ ಇಐಡಿ ಪ್ಯಾರಿ ಕಂಪನಿಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್​ ಪ್ರದಿಪನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ರೆತರ ಕಷ್ಟಕಾಲದ ಸಂದರ್ಭದಲ್ಲಿ ಅವರಿಂದ ಶೇರು ಸಂಗ್ರಹ ಮಾಡಿ ಕಾರ್ಖಾನೆ ಪ್ರಾರಂಭಕ್ಕೆ ದಿ.ಬಿ.ಬಿ. ಹಿರೇರಡ್ಡಿ ಜತೆಗೆ ಶ್ರಮಿಸಿದ್ದೇನೆ. ಅದರಂತೆ ಅಭಿವದ್ಧಿಗೆ ಕಾರ್ಖಾನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದು ತಿಳಿಹೇಳಿದರು.

ಕಾರ್ಖಾನೆ ಆಡಳಿತ ಮಂಡಳಿಯ ಅಧ್ಯ ಮಲ್ಲಣ್ಣ ಯಾದವಾಡ ಮಾತನಾಡಿ, ದೇಶದಲ್ಲಿಯೇ ಸಹಕಾರಿ ರಂಗದ ಸಾಲಮುಕ್ತ ಕಾರ್ಖಾನೆ ಎಂದರೆ ಅದು ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ. ಶೇರುದಾರರ ಋಣ ತೀರಿಸಲು ಪ್ರತಿವರ್ಷ ರಿಯಾಯಿತಿ ದರದಲ್ಲಿ ಒಂದು ಕ್ವಿಂಟಾಲ್​ ಸಕ್ಕರೆ ವಿತರಣೆ ಮಾಡಲಾಗುತ್ತದೆ ಎಂದರು. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ ಶಾಹೀನ್​ ಅಖ್ತರ್​ ಮಾತನಾಡಿ, ಕಾರ್ಖಾನೆಯ ಅಧಿಕಾರಿಗಳು ರೆತರ ಬೇಡಿಕೆಗೆ ಸ್ಪಂದಿಸಿ, ಕಳೆದ ಬಾರಿಗಿಂತ ಹೆಚ್ಚು ಕಬ್ಬು ನುರಿಸಬೇಕು ಎಂದು ಮನವಿ ಮಾಡಿದರು.

ಇಐಡಿ ಪ್ಯಾರಿ ಶುಗರ್ಸ್​ ಜಿಎಂ ಶಿವಸುಬ್ರಮಣಿಯನ್​ ಮಾತನಾಡಿ, ಕಳೆದ ವರ್ಷ 6.10 ಲ ಮೆ. ಟನ್​ ಕಬ್ಬು ನುರಿಸಲಾಗಿತ್ತು. ರೆತರ ಬೇಡಿಕೆಗೆ ಕಂಪನಿ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು. ಆಡಳಿತ ಮಂಡಳಿ ಉಪಾಧ್ಯ ಬಸನಗೌಡ ದ್ಯಾಮನಗೌಡ್ರ, ನಿರ್ದೇಶಕರಾದ ಅಡಿವೆಪ್ಪ ಸುರಗ, ಬಿ.ಎಂ. ತುಪ್ಪದ, ಐ.ಎಸ್​.ಹರನಟ್ಟಿ, ಬಾಳಪ್ಪ ಹಂಜಿ, ಎಂ.ಎಂ.ಆತಾರ, ಎಸ್​.ಜಿ. ಪಾಟೀಲ, ಪಿ.ಬಿ.ಪಾಟೀಲ, ಎಸ್​.ಎಲ್​. ಡುಳ್ಳೋಳ್ಳಿ, ಸಿ.ಎಸ್​. ರಜಪೂತ, ಬಿ.ವಿ.ಪಾಟೀಲ, ಎನ್​.ಎಸ್​. ಚಾಕಲಬ್ಬಿ, ಶಶಿಕಲಾ ಸೋಮಗೊಂಡ, ಶ್ರೀನಿವಾಸ ಕರದಿನ, ರಮೇಶ ಗಂಗರಡ್ಡಿ, ಕೆ.ಎಚ್​.ಬೂದಿ, ಬಸವರಾಜ ಪಾರಶೆಟ್ಟಿ ಇತರರಿದ್ದರು.