ಯಕ್ಕುಂಡಿ ಗ್ರಾಪಂನಲ್ಲಿ ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಿಸಲಾಯಿತು. ಪೈರೋಜಾ ಬಾರಿಗಿಡದ, ಮಾಸಾಬಿ ಇಮ್ಮನ್ನವರ, ಶ್ರೀಶೈಲಗೌಡ ಎನ್, ಹಸನಸಾಬ್ ಬಾರಿಗಿಡದ ಇತರರು ಇದ್ದರು. 
ಜಿಲ್ಲೆ

ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಣೆ

ಯಕ್ಕುಂಡಿ: ಎಸ್‌ಸಿ, ಎಸ್‌ಟಿ ಜನರ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆ ರೂಪಿಸಿದ್ದು, ಸದುಪಯೋಗ ಪಡೆದುಕೊಳ್ಳಿ ಎಂದು ಗ್ರಾಪಂ ಅಧ್ಯಕ್ಷೆ ಪೈರೋಜಾ ಬಾರಿಗಿಡದ ಹೇಳಿದರು.

ಇಲ್ಲಿನ ಗ್ರಾಪಂನಲ್ಲಿ ಸ್ಥಳಿಯ ಸಂಪನ್ಮೂಲ ಶೇ.25 ಅನುದಾನದಲ್ಲಿ 13 ಎಸ್‌ಸಿ ಮತ್ತು ಎಸ್‌ಟಿ ಫಲಾನುಭವಿಗಳಿಗೆ ಹೊಲಿಗೆಯಂತ್ರ ಗುರುವಾರ ವಿತರಿಸಿ ಮಾತನಾಡಿದರು.

ಉಪಾಧ್ಯಕ್ಷೆ ಮಾಸಾಬಿ ಇಮ್ಮನ್ನವರ, ಪಿಡಿಒ ಶ್ರೀಶೈಲಗೌಡ ಎನ್, ಸದಸ್ಯರಾದ ಹಸನಸಾಬ್ ಬಾರಿಗಿಡದ, ಮಂಜುನಾಥ ಪಮ್ಮಾರ, ಸುರೇಶ ಲಮಾಣಿ, ಕೃಷ್ಣಪ್ಪ ಕಂಬಾರ, ಶಿವಾನಂದ ಕಂಬಿಯವರ, ಹಣಮಂತ ರೂಢನ್ನವರ, ತಾಲಿಬ್ ಮುಜಾವರ, ಪ್ರಕಾಶ ಪಾಶ್ಚಾಪುರ, ಭೀಮವ್ವ ಮಾದರ, ಈರಪ್ಪ ಮಾದರ, ಶೇಖವ್ವ ತಿಮ್ಮೇಶಿ, ಅನಸೂಯಾ ನಾಯ್ಕ, ರಮಣೆವ್ವ ಲಮಾಣಿ, ಅನಸೂಯಾ ಲಮಾಣಿ, ನಾಗಪ್ಪ ಕೊಡ್ಲಿ, ಲಕ್ಷ್ಮಣ ಬಟಕುರ್ಕಿ, ಸಂಗಮೇಶ ಸಿದ್ನಾಳ ಇದ್ದರು.