ಸಿಂಧನೂರು ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು. ಸಮಿತಿ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ, ತಾಲೂಕು ಅಧ್ಯಕ್ಷ ನಿರುಪಾದೆಪ್ಪ ಎಲೆಕೂಡ್ಲಿಗಿ, ಉಪಾಧ್ಯಕ್ಷ ಮೌನೇಶ ದಿದ್ದಗಿ, ಗ್ಯಾನಪ್ಪ ಮುದ್ದಾಪುರ ಇತರರಿದ್ದರು. 
ಜಿಲ್ಲೆ

ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

ರುದ್ರಪ್ಪ ವಾಲಿ

ಸಿಂಧನೂರು: ಕೊಪ್ಪಳ ಜಿಲ್ಲಾ ಯಲಬರ್ಗಾ ತಾಲೂಕಿನ ಸಂಗನಾಳದಲ್ಲಿ ದಲಿತ ಯುವಕ ಯಮನೂರಪ್ಪ ಹರಿಜನ ಅವರನ್ನು ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಗ್ರಾಮದ ಮುದುಕಪ್ಪ ಎನ್ನುವ ವ್ಯಕ್ತಿಯು ಕ್ಷೌರ ಮಾಡಲು ಕೇಳಿದ್ದಕ್ಕೆ ಚೂರಿಯಿಂದ ಹಿರಿದು ಕೊಲೆ ಮಾಡಲಾಗಿದೆ. ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು ದಲಿತ ಜನಾಂಗವನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಜೀವನ ನಡೆಸುವುದು ಕಷ್ಟವಾಗಿದೆ. ಕೂಡಲೇ ಯಮನೂರಪ್ಪನ ಕೊಲೆಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ಜಮೀನು ನೀಡಬೇಕು. ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನಾಂಗದವರ ಮೇಲೆ ನಡೆದ ಪ್ರಕರಣಗಳಲ್ಲಿ ಪರಿಹಾರ ನೀಡಲು ಸಮಾಜ ಕಲ್ಯಾಣ ಅಧಿಕಾರಿ ನಿರ್ಲಕ್ಷ್ಯವಹಿಸಿದ್ದು ಈ ಬಗ್ಗೆ ಕ್ರಮವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.