ಗೊಳಸಂಗಿ ಸಮೀಪದ ಚೀರಲದಿನ್ನಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ನಿಮಿತ್ತ ಶನಿವಾರ ರಾತ್ರಿ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ‘ಅಕ್ಕ ಅಂಗಾರ, ತಂಗಿ ಬಂಗಾರ’ ಸಾಮಾಜಿಕ ನಾಟಕದ ದೃಶ್ಯ. 
ಜಿಲ್ಲೆ

ಕಪಟಿಗಳಿಗೆ ಪಾಠ ಕಲಿಸುವುದೇ ನಾಟಕದ ಸಾರ

Vijayapura - Desk - Gurappa Lokuri

ಗೊಳಸಂಗಿ: ಸಮಾಜದಲ್ಲಿನ ಕಪಟಿಗಳ ಆಟೋಪದ ಅಟ್ಟಹಾಸಕ್ಕೆ ಮಟ್ಟ ಹಾಕಿ ಕಥೆಯ ಅಂತ್ಯದಲ್ಲಿ ಕಥಾನಾಯಕನ ಸಂಕಷ್ಟ ಕಣ್ಮರೆಯಾಗುವುದೇ ನಾಟಕದ ಮೂಲಸಾರ ಎಂದು ತೆಲಗಿ ಗ್ರಾಪಂ ಅಧ್ಯಕ್ಷ ಅರವಿಂದ ಕೊಪ್ಪದ ಹೇಳಿದರು.

ಸಮೀಪದ ಚೀರಲದಿನ್ನಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ರಾತ್ರಿ ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ‘ಅಕ್ಕ ಅಂಗಾರ, ತಂಗಿ ಬಂಗಾರ’ ಎಂಬ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಮಂಜುನಾಥ ಆರೇಶಂಕರ ಮಾತನಾಡಿ, ಆಧುನಿಕ ದಿನದಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿ ರಂಗಕಲೆಯ ಅಸ್ತಿತ್ವಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಇದರಿಂದಾಗಿ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಇಂಥ ಜಾತ್ರೋತ್ಸವಗಳಲ್ಲಿ ನಾಟಕ ಕಲೆ ಪ್ರದರ್ಶಿಸುವ ಮೂಲಕ ಕಲಾವಿದರ ಬದುಕಿಗೆ ಕೈ ಜೋಡಿಸೋಣ ಎಂದರು.

ವೇ. ರುದ್ರಸಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮಾರುತೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಸಿದ್ರಾಮಪ್ಪಗೌಡ ಪಾಟೀಲ, ನಾಗನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಹನುಮಂತ ಕಾಖಂಡಕಿ, ಶಾಂತಯ್ಯ ಹಿರೇಮಠ, ಹುಚ್ಚಯ್ಯ ಘಂಟಿಮಠ, ಯಲ್ಲಪ್ಪ ತುಂಬರಮಟ್ಟಿ, ರಾಮಣ್ಣ ಮಳಲಿ, ಗುರುಸಿದ್ದಪ್ಪಗೌಡ ಪಾಟೀಲ, ಸಿದ್ದನಗೌಡ ಬಸರೆಡ್ಡಿ ಇತರರಿದ್ದರು. ಕುಮಾರ ಹಿರೇಮಠ ಸ್ವಾಗತಿಸಿದರು. ವೈ.ಕೆ. ಪತ್ತಾರ ನಿರೂಪಿಸಿದರು. ಲಕ್ಷ್ಮಣಗೌಡ ಪಾಟೀಲ ವಂದಿಸಿದರು.