ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇಇ ರವೀಂದ್ರನಾಥಗೆ ರೈತರು ಮನವಿ ಸಲ್ಲಿಸಿದರು. ಜಿಪಂಮಾಜಿ ಸದಸ್ಯ ಅಕ್ಕಿ ತೋಟೇಶ, ತಾಪಂ ಮಾಜಿ ಸದಸ್ಯ ಪಿ.ಕೊಟ್ರೇಶ, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಗ್ರಾಪಂ ಸದಸ್ಯರಾದ ಮಾಬುಸಾಬ್, ಮೈಲಾರ ಶಿವಕುಮಾರ, ದೊಡ್ಡಬಸಪ್ಪ, ಮಂಜುನಾಥ ಪಾಟೀಲ್ ಇದ್ದರು. 
ಜಿಲ್ಲೆ

ತಂಬ್ರಹಳ್ಳಿಗೆ ಬಂದು ಮನವಿ ಸ್ವೀಕರಿಸಿದ ಅಧಿಕಾರಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಇಟ್ಟಿಗಿಯಿಂದ ತಂಬ್ರಹಳ್ಳಿವರೆಗೆ 66/11 ಕೆವಿ ಸಾಮರ್ಥ್ಯದ ಟವರ್ ಲೈನ್ 1997ರಲ್ಲಿ ಅಳವಡಿಸಿದ್ದು, ಹೊಸ ಲೈನ್ ಅಳವಡಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ ಆಗ್ರಹಿಸಿದರು.

ತಂಬ್ರಹಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಆಗಮಿಸಿದ್ದ ಇಟ್ಟಿಗಿ ವಿದ್ಯುತ್ ಸ್ವೀಕರಣಾ ಕೇಂದ್ರದ ಇಇ ರವೀಂದ್ರನಾಥಗೆ ರೈತರು ಬುಧವಾರ ಮನವಿ ಸಲ್ಲಿಸಿದ ವೇಳೆ ಬುಧವಾರ ಮಾತನಾಡಿದರು. ತಂಬ್ರಹಳ್ಳಿ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳು ಕೃಷಿ ಚಟುವಟಿಕೆಗಳಿಂದ ಕೂಡಿವೆ. ಕೃಷಿ ಚಟುವಟಿಕೆಗೆ ತಂಬ್ರಹಳ್ಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರಿಂದ ಪೂರೈಕೆಯಾಗುವ ವಿದ್ಯುತ್ ಸಾಲುತ್ತಿಲ್ಲವಾದ್ದರಿಂದ ರೈತರ ನಿಯೋಗ ಇಟ್ಟಿಗಿ ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ ಹೋದಾಗ ಮನವಿ ಸ್ವೀಕರಿಸಲು ಅಧಿಕಾರಿಗಳು ಆಗಮಿಸಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಇಲಾಖೆ ಕಚೇರಿ ಬಾಗಿಲಿಗೆ ಅಂಟಿಸಿ ಬಂದಿದ್ದರು ಎಂದು ಹೇಳಿದರು.

ಕಳೆದ ಜನವರಿಯಲ್ಲಿ ಮುನಿರಾಬಾದ್ ಕಚೇರಿಗೆ ತೆರಳಿ, ತಂಬ್ರಹಳ್ಳಿಯ ವಿದ್ಯುತ್ ವಿತರಣಾ ಕೇಂದ್ರದ ಸಾಮರ್ಥ್ಯ ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಇಲಾಖೆ 9.53 ಕೋಟಿ ರೂ. ಮೊತ್ತದಲ್ಲಿ ಅಂದಾಜು ಪಟ್ಟಿ ತಯಾರಿಸಿತ್ತು. ಈ ಕುರಿತ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.

ಪ್ರಮುಖರಾದ ಬಸವಲಿಂಗನಗೌಡ, ಗಂಗಾಧರಗೌಡ, ಗೌರಜ್ಜನವರ ಗಿರೀಶ, ಜಾಕೀರ್‌ಸಾಬ್, ಗುಡ್ಲಾನೂರ ವಿರೂಪಾಕ್ಷಿ, ಸಪ್ಪರದ ಪಂಪಾಪತಿ ಇತರರಿದ್ದರು.