ಬೈಲಹೊಂಗಲ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಮ್ಮ ದೇಶದ ಸೆನಿಕರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯ ಹಿಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದೇಶದ ಸೆನಿಕರಿಗೆ ಉಗ್ರರ ವಿರುದ್ಧ ಹೋರಾಟದಲ್ಲಿ ಮುಂಬರುವ ದಿನಗಳಲ್ಲಿ ಯಶಸ್ಸು ಸಿಗಲಿ ಎಂದು ಬಿಜೆಪಿ ವತಿಯಿಂದ ಪಟ್ಟಣದ ಲಕ್ಷಿ$್ಮದೇವಿಯ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯ ಗುರು ಮೆಟಗುಡ್ಡ, ಮಂಡಲ ಅಧ್ಯ ಸುಭಾಷ ತುರಮರಿ ಮಾತನಾಡಿ, ಉಗ್ರರನ್ನು ಸಂಪೂರ್ಣ ಶಮನ ಮಾಡಿ, ಶಾಂತಿಪ್ರಿಯ, ಅಧ್ಯಾತ್ಮದ ಬೀಡು ಭಾರತ ದೇಶದಲ್ಲಿ ಸದಾ ಶಾಂತಿ ನೆಲೆಸುವಂತೆ ಮಾಡಲು ದೇಶದ ಸೆನಿಕರಿಗೆ ದೇವಿಯು ಆಶೀರ್ವದಿಸಲೆಂದು ಪೂಜೆಗೆದು ಪ್ರಾರ್ಥಿಸಲಾಗಿದೆ ಎಂದರು.
ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ ಕಡಿ, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ದಯಾನಂದ ಪರಾಳಶೆಟ್ಟರ, ಶಿವಾನಂದ ಬಡ್ಡಿಮನಿ, ಶಂಭು ಹೂಲಿ, ಗೌಡಪ್ಪ ಹೊಸಮನಿ, ಬಸವರಾಜ ಶಿಂತ್ರಿ, ಪುಂಡಲೀಕ ಇಂಚಲ, ಶ್ರೀನಿವಾಸ ಭರಮಣ್ಣವರ, ಬಸವರಾಜ ಬಡಿಗೇರ, ಸದಾಶಿವಗೌಡ ಪಾಟೀಲ, ಮಲ್ಲಿಕಾರ್ಜುನ ಇಂಚಲ, ಸುಧೀರ ಮಾಳೋದೆ ಇತರರು ಇದ್ದರು.