ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಸಂಘದಿಂದ ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಚಂದ್ರಶೇಖರ ಅರಬಾವಿ, ಪಿ.ಸಿ.ಪಾಯನ್ನವರ, ಭರತ ಕುಂಬಾರ, ಎ.ಐ.ನದಾಫ್, ಎಸ್.ಬಿ. ಮಗದುಮ್ಮ ಇತರರು ಇದ್ದರು. 
ಜಿಲ್ಲೆ

ಸೌಲಭ್ಯ ಒದಗಿಸಲು ನಿವೃತ್ತರ ಒತ್ತಾಯ

ಚಿಕ್ಕೋಡಿ: ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ 2022ರ ಜುಲೈ 1 ರಿಂದ 2024ರ ಜುಲೈ 31 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಿಕೊಡಬೇಕು ಎಂದು ಪ್ರಾಥಮಿಕ ಶಾಲಾ ಸಂಘದ ರಾಜ್ಯ ಪ್ರಧಾನ ಸಂಚಾಲಕ ಚಂದ್ರಶೇಖರ ಅರಬಾವಿ ಹೇಳಿದರು.

ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಈಚೆಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಿವೃತ್ತರಿಗೆ ಹಳೆಯ ವೇತನ ಶ್ರೇಣಿ ಪರಿಗಣಿಸುತ್ತಿರುವುದು ಸಂಧ್ಯಾಕಾಲದಲ್ಲಿರುವರಿಗೆ ಆಘಾತವಾಗುತ್ತದೆ. 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತರಾದ ನಮಗೆ ಎಲ್ಲ ಹಂತದ ಸೌಲಭ್ಯ ನೀಡುವಂತೆ ಮನವಿ ಮಾಡಿದರು.

ರಾಜ್ಯ ಸಂಚಾಲಕ ಪಿ.ಸಿ.ಪಾಯನ್ನವರ, ಭರತ ಕುಂಬಾರ, ಎ.ಐ.ನದಾಫ್, ಎಸ್.ಬಿ.ಮಗದುಮ್ಮ, ಎಲ್.ಎನ್.ನಾಯಿಕ, ಬಿ.ಸಿ.ಬಸ್ತವಾಡೆ, ಎ.ಟಿ.ಮುಲ್ಲಾ, ಎ.ಎ.ಪಟೇಲ್, ಎಂ.ಎಲ್. ವಂಟಿಗೆ, ಜೆ.ಆರ್. ದಿನಕರ, ವಿ.ಡಿ.ನಾಯಿಕ, ಪಿ.ಎನ್.ಕಾಂಬಳೆ, ಐ.ಜಿ. ಹಳ್ಳೊಳ್ಳಿ ಇತರರು ಇದ್ದರು.